Select Your Language

Notifications

webdunia
webdunia
webdunia
webdunia

ಈತನ ಬಳಿ ಲವ್ ಜಿಹಾದಿಗಳನ್ನು ಗುರುತಿಸಲು ಫಾರ್ಮುಲಾ ಇದೆಯಂತೆ!

ಈತನ ಬಳಿ ಲವ್ ಜಿಹಾದಿಗಳನ್ನು ಗುರುತಿಸಲು ಫಾರ್ಮುಲಾ ಇದೆಯಂತೆ!
ಅಲೀಗಡ್ , ಮಂಗಳವಾರ, 16 ಸೆಪ್ಟಂಬರ್ 2014 (16:43 IST)
ತಾನು ಲವ್ ಜಿಹಾದಿಗಳನ್ನು ಗುರುತಿಸಬಲ್ಲೆ ಎಂದು ಅಲೀಗಡ್‌ನ  ಧರ್ಮ ಜಾಗರಣ ವೇದಿಕೆ ಅಧ್ಯಕ್ಷ ರಾಜೇಶ್ವರ್ ಸಿಂಗ್  ಪ್ರತಿಪಾದಿಸಿದ್ದಾರೆ ಎಂದು ರಾಷ್ಟ್ರೀಯ ದೈನಿಕವೊಂದರಲ್ಲಿ ಪ್ರಕಟವಾದ ವರದಿ ತಿಳಿಸಿದೆ. 

ಆತ (ಲವ್ ಜಿಹಾದಿ) ಚೌಧರಿ, ಚೌಹಾಣ್ ಅಥವಾ ತ್ಯಾಗಿಯಂತಹ ಅಡ್ಡ ಹೆಸರುಗಳನ್ನಿಟ್ಟುಕೊಂಡು ಹಿಂದು ಧರ್ಮೀಯನೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾನೆ " ಎಂದು ರಾಜೇಶ್ವರ್ ಸಿಂಗ್ ಹೇಳಿದ್ದಾರೆ.
 
ಆತ ಯಾವಾಗಲೂ ಕಲಾವಾ( ಮಣಿಕಟ್ಟಿನ ಸುತ್ತ ಕಟ್ಟಲ್ಪಡುವ ಕೆಂಪು ಬಣ್ಣದ ಧಾರ್ಮಿಕ ದಾರ) ವನ್ನು ಕಟ್ಟಿಕೊಂಡಿರುತ್ತಾನೆ ಎಂದು ಸಿಂಗ್ ತಿಳಿಸಿದ್ದಾರೆ.
 
ಉಲ್ಲೇಖನೀಯವಾದುದೆಂದರೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ 72 ಜನರನ್ನು ಮರಳಿ ಹಿಂದು ಧರ್ಮಕ್ಕೆ ಪರಿವರ್ತಿಸುವ ಮೂಲಕ ರಾಜೇಶ್ವರ್ ಸಿಂಗ್ ಮತ್ತು ಅವರ ಸಂಘಟನೆ ಸುದ್ದಿಯಾಗುತ್ತಿದೆ. 
 
ಅವರ ಪ್ರಕಾರ, ಲವ್ ಜಿಹಾದ್‌ನಲ್ಲಿ ತೊಡಗಿಕೊಂಡಿರುವ ಮುಸ್ಲಿಮರ ಬಗ್ಗೆ ಜಾಗೃತವಾಗಿರುವ ಅವಶ್ಯಕತೆ ಇದೆ. 

Share this Story:

Follow Webdunia kannada