Select Your Language

Notifications

webdunia
webdunia
webdunia
webdunia

100 ವರ್ಷ ಸತಿಪತಿಗಳಾಗಿ ಬದುಕಿದರು, ಸಾವಿನಲ್ಲಿಯೂ ಜತೆಯಾದರು

100 ವರ್ಷ ಸತಿಪತಿಗಳಾಗಿ ಬದುಕಿದರು, ಸಾವಿನಲ್ಲಿಯೂ ಜತೆಯಾದರು
, ಮಂಗಳವಾರ, 5 ಮೇ 2015 (15:56 IST)
ಸರಿಸುಮಾರು 100 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿಗಳಿಬ್ಬರು ಮರಣದಲ್ಲಿಯೂ ಒಂದಾಗಿ ಅನುಪಮ ಪ್ರೇಮವನ್ನು ಮೆರೆದಿದ್ದಾರೆ. 20 ವರ್ಷ ವಯಸ್ಸಿನಲ್ಲಿ ಫಕೀರಾ, ತಮಗಿಂತಲೂ 4 ವರ್ಷ ಕಿರಿಯಳಾದ ರಾಧಿಕಾಳ ಜತೆ ಹಸೆಮಣೆ ಏರಿದ್ದರು. 

ಭಾರತ ನೇಪಾಳ ಗಡಿ ಪ್ರದೇಶದ ಹಳ್ಳಿಯಾದ ಬಿಚುಲಿಯು ನಿವಾಸಿಗಳು ಕಣ್ಣೀರಿನೊಂದಿಗೆ ಈ ಅಪರೂಪದ ದಂಪತಿಗಳಿಗೆ ಗೌರವವನ್ನು ಸಮರ್ಪಿಸಿದ್ದಾರೆ. ಸಾವನ್ನಪ್ಪುವಾಗ ಫಕೀರಾ ವಯಸ್ಸು 107, ಆತನ ಪ್ರೀತಿಯ ಪತ್ನಿಯ ವಯಸ್ಸು 103.
 
ಕಳೆದ ಶನಿವಾರ ರಾಧಿಕಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ತನ್ನ ಪ್ರಿಯ ಜೀವನಸಂಗಾತಿಯ ಅಗಲಿಕೆ ತಾಳಲಾದರೆ ಫಕೀರಾ ಕೂಡ ಉಸಿರನ್ನು ನಿಲ್ಲಿಸಿದ್ದಾರೆ. ಮಕ್ಕಳಿಲ್ಲದ  ಅವರ ಅಂತ್ಯಸಂಸ್ಕಾರಕ್ಕೆ ಹಿಂದೂ- ಮುಸ್ಲಿಂ ಭೇದವಿಲ್ಲದೇ ಹಳ್ಳಿಯ ಎಲ್ಲ ಸಮುದಾಯದ ಜನರು ಸಹ ಪಾಲ್ಗೊಂಡಿದ್ದರು. 
 

Share this Story:

Follow Webdunia kannada