Webdunia - Bharat's app for daily news and videos

Install App

7 ವರ್ಷದ ಬಾಲಕಿಯ ಬಾಯಲ್ಲಿ ಬೆಳೆದಿದ್ದವು 202 ಅಸಹಜ ಹಲ್ಲುಗಳು!

Webdunia
ಬುಧವಾರ, 29 ಅಕ್ಟೋಬರ್ 2014 (17:53 IST)
7 ವರ್ಷದ ಹುಡುಗಿಯ ಬಾಯಲ್ಲಿ ಬೆಳೆದಿದ್ದ ಕನಿಷ್ಠ 202 ಅಸಹಜ ಹಲ್ಲುಗಳನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದಾರೆ ಎಂದು ವರದಿಯಾಗಿದೆ. 

ಗುರಗಾಂವ್ ಮೂಲದ ಹೋಟೆಲು ಮಾಲೀಕರೊಬ್ಬರು ತಮ್ಮ ಪುಟ್ಟ ಮಗಳೊಬ್ಬಳನ್ನು ಬಾಯಿಯಲ್ಲಿ ಉಬ್ಬಿದ ಒಸಡುಗಳು ಮತ್ತು ಅತಿಯಾದ ಎಂಬ ಕಾರಣಕ್ಕೆ ದಂತ ಕೇಂದ್ರಕ್ಕೆ ಕರೆ ತಂದಿದ್ದರು. 
 
ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ,  ಸಾಮಾನ್ಯ ದಂತ ಅಂಗಾಂಶಗಳಿಂದ ರಚಿತವಾಗಿದ್ದ, ಅಸ್ಪಷ್ಟವಾದ ರೀತಿಯಲ್ಲಿ ಬೆಳೆದ ಸಂಕೀರ್ಣ ಸ್ವರೂಪದ ಗಡ್ಡೆಯಿಂದ ಆಕೆ ಬಳಲುತ್ತಿರುವುದು ಎಕ್ಸರೆಯಿಂದ ಬಹಿರಂಗವಾಯಿತು. ಇದು ಬಾಯಿ ಒಳಗೆ ಮಾತ್ರ ಗೋಚರಿಸುತ್ತಿತ್ತು ಎಂದು ಬಾಯಿ ಮತ್ತು ಮ್ಯಾಕ್ಸಿಲೊಫೇಸಿಯಲ್ ಶಸ್ತ್ರಚಿಕಿತ್ಸೆ ಮುಖ್ಯಸ್ಥರಾದ ಡಾ ಅಜಯ್ ರಾಯ್‌ಚೌಧರಿ ತಿಳಿಸಿದ್ದಾರೆ.
 
ಸಾಮಾನ್ಯವಾಗಿ, ನಾವು ಕೆಲವು ಅಸಹಜ ಹಲ್ಲಿನಂತಹ ವಿನ್ಯಾಸಗಳನ್ನು ರೋಗಿಗಳಲ್ಲಿ ಕಾಣಬಹುದು. ಆದರೆ 7 ವರ್ಷದ ಮಗುವಿನ ಬಾಯಿಯಲ್ಲಿ ಕನಿಷ್ಠ 202 ಅಸಹಜ ಹಲ್ಲುಗಳಿದ್ದವು  ಎಂಬುದು ನಮಗೆ  ಶಾಕ್  ತರಿಸಿತು. ಹಲ್ಲಿನ ತರಹದ ಈ ಅಸಹಜ ಗಡ್ಡೆಯನ್ನು ತೆಗೆಯಲು ನಮಗೆ ಸುಮಾರು ಎರಡು ಗಂಟೆಗಳು ಬೇಕಾಯಿತು ಎಂದು ಏಮ್ಸ್ ವೈದ್ಯರು ಹೇಳಿದ್ದಾರೆ. 
 
"ಶಸ್ತ್ರಚಿಕಿತ್ಸೆ ಸರಳವಾಗಿತ್ತು. ಆದರೆ  ಅಂಗಾಂಶಗಳಿಗೆ ಅಥವಾ ದವಡೆಗಳಿಗೆ ಕಂಚಿತ್ ಹಾನಿಯಾದರೂ, ಗುಣವಾಗಲು ದೀರ್ಘ ಸಮಯ ತೆಗೆದುಕೊಳ್ಳಬಹುದಾದರಿಂದ, ಹೆಚ್ಚಿನ ಮುತುವರ್ಜಿಯಿಂದ ಸರ್ಜರಿ ನಡೆಸಬೇಕಾಯಿತು. ಗಡ್ಡೆಯನ್ನು ಕತ್ತರಿಸಲು ಮೂಳೆ ಕತ್ತರಿಸುವ ವಿಶೇಷ ಸಾಧನವನ್ನು ಬಳಸಿಕೊಳ್ಳಲಾಯಿತು" ಎಂದು  ಏಮ್ಸ್‌ನಲ್ಲಿ ದಂತ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಓರಲ್ ಆಂಡ್ ಮ್ಯಾಕ್ಸಿಲೊಫೇಸಿಯಲ್ ಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕಿಯಾಗಿರುವ ಡಾ ಒಂಗಕಿಲಾ ಭುಟಿಯಾ ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments