Select Your Language

Notifications

webdunia
webdunia
webdunia
webdunia

ಭಾರತದ ಅತಿ ಚಿಕ್ಕ ಜಿಹಾದಿ ಈ ಬಾಲಕ!

ಭಾರತದ ಅತಿ ಚಿಕ್ಕ ಜಿಹಾದಿ ಈ ಬಾಲಕ!
ಲಕ್ನೋ , ಮಂಗಳವಾರ, 2 ಫೆಬ್ರವರಿ 2016 (11:09 IST)
ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಪಟ್ಟಿದ್ದ ಯುವಕ ದೇಶದ ಅತಿ ಚಿಕ್ಕ ಜಿಹಾದಿ ಎನಿಸಿಕೊಂಡಿದ್ದಾನೆ. ಕಳೆದ ವಾರ ಮುಂಬೈ ಕೋರ್ಟ್ ಆತನನ್ನು  ರಿಮ್ಯಾಂಡ್ ಹೋಮ್‌ಗೆ ಕಳುಹಿಸಿದೆ. ಆತ ಐಸಿಸ್ ಜತೆ ನೇರ ಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದೆ.

ಆರೋಪಿ ಇಮ್ರಾನ್ (ಹೆಸರು ಬದಲಿಸಲಾಗಿದೆ) ವಕೀಲರು ಆತನಿಗೆ ಕೇವಲ 16 ವರ್ಷ ಎಂದು ವಾದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆತ ದೇಶದ ಅತಿ ಚಿಕ್ಕ ಜಿಹಾದಿ ಎಂದು ಗುರುತಿಸಲಾಗಿದೆ. ಆತ 12 ನೇ ತರಗತಿ ವಿದ್ಯಾರ್ಥಿಯಾಗಿದ್ದು ಮುಂಬೈ ಎಟಿಸ್ ಮತ್ತು ಯುಪಿ ಪೊಲೀಸ್ ಜನವರಿ 24 ರಂದು ಆತನನ್ನು ಬಂಧಿಸಿತ್ತು. 
 
ಆತನ ಪರ ವಕೀಲರು 10 ನೇ ತರಗತಿ ಅಂಕಪಟ್ಟಿಯನ್ನು ಸಹ ಕೋರ್ಟ್‌ಗೆ ಪ್ರಸ್ತುತ ಪಡಿಸಿದ್ದು, ಅದರಲ್ಲಿ ಆತ 1999ರಲ್ಲಿ ಜನಿಸಿದ್ದ ಎಂಬ ದಾಖಲೆ ಇದೆ.ಆದರೆ ಆತನ ಚುನಾವಣಾ ಗುರುತಿನ ಪತ್ರವನ್ನು ಸಾಕ್ಷ್ಯವನ್ನಾಗಿಟ್ಟುಕೊಂಡು ಆತನಿಗೆ 20 ವರ್ಷವಾಗಿದೆ ಎಂದು ಹೇಳುತ್ತಿದ್ದಾರೆ.
 
ಇಮ್ರಾನ್ ಐಸ್‌ಗೆ ಯುವಕರನ್ನು ನೇಮಕಾತಿ ಮಾಡುವ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Share this Story:

Follow Webdunia kannada