Webdunia - Bharat's app for daily news and videos

Install App

ಸೆಕ್ಸ್ ಸುಖದ ಆಸೆ ತೋರಿಸಿ ಹಣ ಕೀಳುತ್ತಿದ್ದ ಮಹಿಳೆಯರು ಅರೆಸ್ಟ್

Webdunia
ಗುರುವಾರ, 18 ಆಗಸ್ಟ್ 2016 (16:46 IST)
ಮಹಿಳೆಯರ ಗುಂಪು ಯುವಕನೊಬ್ಬನನ್ನು ಮನಬಂದಂತೆ ಥಳಿಸಿ ಹಣವನ್ನು ಕಿತ್ತುಕೊಂಡ ನಂತಕ ಯುವಕ ಹನಿ ಟ್ರ್ಯಾಪ್‌ಗೊಳಗಾದ ಘಟನೆ ಹರಿಯಾಣಾದ ಫರಿದಾಬಾದ್‌ ಜಿಲ್ಲೆಯಿಂದ ವರದಿಯಾಗಿದೆ.
 
ಯುವಕನ ಮೇಲೆ ಹಲ್ಲೆ ಮಾಡಿದ ಮೂವರು ಮಹಿಳೆಯರನ್ನು ಬಂಧಿಸಲಾಗಿದ್ದು, ಗ್ಯಾಂಗ್‌ನಲ್ಲಿದ್ದ ಕೆಲ ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮಹಿಳೆಯರ ಗುಂಪು ಯುವಕರಿಗೆ ಸೆಕ್ಸ್ ಸುಖದ ಆಸೆ ತೋರಿಸಿ ನಂತರ ಅವರನ್ನು ಲೂಟಿ ಮಾಡುತ್ತಿದ್ದರು. ಇದೀಗ ಪೊಲೀಸರ ವಶದಲ್ಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಹನಿ ಟ್ರ್ಯಾಪ್‌ ಗ್ಯಾಂಗ್‌ ಬಲೆಗೆ ಸಿಲುಕಿದ ಪಾಲಿ ಗ್ರಾಮದ ಯುವಕ ಅಮಿತ್ ಭಾಡನಾ ಪ್ರಕಾರ, ಆರಂಭದಲ್ಲಿ ಮಹಿಳೆಯರು ತಾವು ಪೊಲೀಸ್ ಅಧಿಕಾರಿಗಳೆಂದು ಮಾಹಿತಿ ನೀಡಿ ಕರೆದುಕೊಂಡು ಹೋಗಿ ನಂತರ ಸೆಕ್ಸ್‌ನಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದ್ದಾರೆ. ತದನಂತರ ಹಣ ನೀಡದಿದ್ದಲ್ಲಿ ಅತ್ಯಾಚಾರವೆಸಗಿದ್ದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಮಹಿಳೆಯರು ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿಸಿದ್ದಾನೆ.
 
ಮಹಿಳೆಯರಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿರುವುದರಿಂದ ಕಂಗಾಲಾದ ಅಮಿತ್, ಪೊಲೀಸ್ ಠಾಣೆಗೆ ತೆರಳಿ ಘಟನೆಯ ಬಗ್ಗೆ  ಮಾಹಿತಿ ನೀಡಿ ದೂರು ದಾಖಲಿಸಿದ್ದಾನೆ. 
 
ಪೊಲೀಸರು, ಅಮಿತ್‌ನಿಗೆ ಮಹಿಳೆಯರನ್ನು ಭೇಟಿ ಮಾಡಿ ಹಣ ನೀಡುವಂತೆ ಹೇಳಿದ್ದಾರೆ. ಅಮಿತ್‌ನಿಂದ ಹಣ ಪಡೆಯಲು ಬಂದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
 
ಹನಿ ಟ್ರ್ಯಾಪ್‌ ಗ್ಯಾಂಗ್‌ನ ಇತರ ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಆರೋಪಿ ಪರಾರಿಯಾಗಿದ್ದಾರೆ. ಆದರೆ, ಆರೋಪಿಗಳ ಬಗ್ಗೆ ಸುಳಿವು ದೊರಕಿದ್ದು, ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಶೀಘ್ರದಲ್ಲೇ ನಿವೃತ್ತಿ ಪಡೆಯುವುದಾಗಿ ಹೇಳಿದ್ದ: ಕ್ಯಾಪ್ಟನ್ ಸುಮೀತ್‌ ಸಬರ್ವಾಲ್‌ಗೆ ತಂದೆಯ ಕಣ್ಣೀರ ಅಂತಿಮ ವಿದಾಯ

ರಾತೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರ ಭೇಟಿ: ತನಿಖೆಗೆ ಆದೇಶ

ಬಾಂಬ್‌ ಬೆದರಿಕೆ: ನಾಗ್ಪುರ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಲಂಡನ್ ಬೆನ್ನಲ್ಲೇ ಪ್ಯಾರಿಸ್‌ಗೆ ನಿಗದಿಯಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದು

ಮುಂದಿನ ಸುದ್ದಿ
Show comments