Select Your Language

Notifications

webdunia
webdunia
webdunia
webdunia

ತಾಜ್‌ಮಹಲ್ ಹಿಂದೂ ದೇವಾಲಯವೇ?

ತಾಜ್‌ಮಹಲ್ ಹಿಂದೂ ದೇವಾಲಯವೇ?
ಆಗ್ರಾ , ಶನಿವಾರ, 11 ಏಪ್ರಿಲ್ 2015 (09:30 IST)
ವಿಶ್ವಪ್ರಸಿದ್ಧ ಸ್ಮಾರಕ ಆಗ್ರಾದ ತಾಜಮಹಲ್ ಮೂಲತಃ ಹಿಂದೂ ದೇವಾಲಯವಾಗಿತ್ತು ಎಂಬ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡುವಂತೆ  ಸ್ಥಳೀಯ ನ್ಯಾಯಾಲಯ ಗೃಹ ಸಚಿವಾಲಯ,ಪುರಾತತ್ವ ಇಲಾಖೆ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. ಸ್ಪಷ್ಟನೆ ನೀಡಲು ಮೇ 6 ರವರೆಗೆ ಗಡುವು ನೀಡಲಾಗಿದೆ.
ತಾಜ್ ಪುರಾತನ ಶಿವ ದೇವಾಲಯವಾಗಿದ್ದು, ಹೀಗಾಗಿ ಹಿಂದೂಗಳಿಗೆ ಇಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು  ಆರು ವಕೀಲರು  ಅರ್ಜಿ ಸಲ್ಲಿಸಿದ್ದರು. 
 
ಮುಂದಿನ ವಿಚಾರಣೆ ಮೇ 13ಕ್ಕೆ ನಡೆಯಲಿದೆ. 
 
ಮೊಘಲ್  ದೊರೆ ಷಹಜಹಾನ್‌ನಿಂದ ನಿರ್ಮಾಣವಾದುದೆಂದು ಹೇಳಲಾಗುತ್ತಿರುವ ತಾಜ್‌ಮಹಲ್ ಹಿಂದೆ ಹಿಂದೂ ದೇವಾಲಯವಾಗಿತ್ತು ಎಂಬ ವಾದಗಳು ಇತ್ತೀಚಿಗೆ ಕೇಳಿ ಬರುತ್ತಿವೆ.  

Share this Story:

Follow Webdunia kannada