Webdunia - Bharat's app for daily news and videos

Install App

ತಾಯಿಯಾದ ಯುವರತ್ನ ನಟಿ ಸಯೇಶಾ

Webdunia
ಭಾನುವಾರ, 25 ಜುಲೈ 2021 (09:34 IST)
ತಮಿಳು ಚಿತ್ರರಂಗದ ಖ್ಯಾತ ನಟ ಆರ್ಯ ಮತ್ತು ಉತ್ತರ ಭಾರತದ ನಟಿ ಸಯೇಶಾ ದಂಪತಿಗಳಿಗೆ ಒಂದು ಮುದ್ದಾದ ಹೆಣ್ಣು ಮಗುವಾಗಿದ್ದು,  ಸಂಭ್ರಮ ಮನೆಮಾಡಿದೆ. ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಜೊತೆ ಯುವರತ್ನ ಸಿನಿಮಾದಲ್ಲಿ ನಟಿಸಿದ್ದ ಸಯೇಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಾರ್ಚ್ 2019 ರಲ್ಲಿ ತಾರಾಜೋಡಿ ವಿವಾಹವಾಗಿದ್ದು ಮದುವೆಯ ಎರಡು ವರ್ಷಗಳ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಇವರ ಮೊದಲನೆಯ ಮಗುವಾಗಿದ್ದು, ಇಬ್ಬರ ಮನೆಯಲ್ಲಿ ಸಂಭ್ರಮ ನೆಲೆಸಿದೆ.



 

ಸಿಹಿ ಸುದ್ದಿಯನ್ನು ಮೊದಲಿಗೆ ದಕ್ಷಿಣ ಭಾರತದ ನಟ ಮತ್ತು ನಿರ್ಮಾಪಕರಾದ ವಿಶಾಲ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ "ತುಂಬಾ ಖುಷಿ ಅನ್ನಿಸುತ್ತಿದೆ ಏಕೆಂದರೆ ನನ್ನ ಸಹೋದರ ಜ್ಯಾಮಿ ಮತ್ತು ಸಯೇಶಾಗೆ ಹೆಣ್ಣು ಮಗುವೊಂದು ಜನಿಸಿದ್ದು, ನಾನು ಇಂದು ಚಿಕ್ಕಪ್ಪನಾಗಿದ್ದೇನೆ. ಮಗುವನ್ನು ನೋಡಲು ತುಂಬಾ ಕಾತುರನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಸುದ್ದಿಯು ಹೊರಬೀಳುತ್ತಿದ್ದಂತೆ ಆರ್ಯ ದಂಪತಿಗೆ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಇತರೆ ನಾಯಕ ನಟರು ಅಭಿನಂದನೆಯನ್ನು ತಿಳಿಸಿದ್ದಾರೆ. ಸಯೇಶಾ ತಾನು ಗರ್ಭಿಣಿ ಆಗಿರುವ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಹಾಗಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಕೊಂಚ ಅಚ್ಚರಿ ಮೂಡಿಸಿದರೂ ನಂತರದಲ್ಲಿ ವಿಶಾಲ್ ಹಂಚಿಕೊಂಡ ವಿಷಯಕ್ಕೆ ಅಭಿಮಾನಿಗಳು  ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕೆಲ ಅಭಿಮಾನಿಗಳು ನಿನ್ನೆಸರ್ಪಟ್ಟ ಪರಂಬರೈ ತುಂಬಾ ವಿಜೃಂಭಣೆಯಿಂದ ಬಿಡುಗಡೆ ಆಯ್ತು, ಇಂದು ಹೆಣ್ಣು ಮಗು ಜನ್ಮಿಸಿದ್ದು ಎಂತಹ ಸಿಹಿ ಸುದ್ದಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯದನ್ನ ಮಾಡಲಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಾರೆ.
ಸಯೇಶಾ ಬಾಲಿವುಡ್ನ ಮಾಜಿ ನಟ ಸುಮೀತ್ ಸೈಗಲ್ ಮತ್ತು ಶಾಹೀನ್ ಬಾನು ಅವರ ಪುತ್ರಿ ಆಗಿದ್ದು, ಅವರು ಹಿರಿಯ ನಟಿ ಸೈರಾ ಬಾನು ಮತ್ತು ದಿವಂಗತ ನಟ ದಿಲೀಪ್ ಕುಮಾರ್ ಅವರ ಮೊಮ್ಮಗಳು. ತನ್ನ ಗಜಿನಿಕಾಂತ್ ಸಹನಟ ಆರ್ಯ ಜೊತೆ ಮಾರ್ಚ್ 10, 2019 ರಂದು ವಿವಾಹವಾಗಿದ್ದರು. ಇವರು ವಿವಾಹವಾದಾಗ ಸಯೇಶಾಗೆ ಕೇವಲ 21 ವರ್ಷ ವಯಸ್ಸಾಗಿತ್ತು. ಕಪ್ಪನ್, ಸರ್ಪಟ್ಟ ಪರಂಬರೈ, ಟೆಡ್ಡಿ ಮತ್ತು ಇನ್ನಿತರ ಹಿಟ್ ಚಿತ್ರಗಳಿಗೆ ಆರ್ಯ ಹೆಚ್ಚು ಹೆಸರುವಾಸಿಯಾಗಿದ್ದರೆ. ಸಯ್ಯೇಶಾ ಮೊದಲು ಬಾಲಿವುಡ್ ಚಿತ್ರದಲ್ಲಿ ಪಾದಾರ್ಪಣೆ ಮಾಡಿದರು ಮತ್ತು ನಂತರ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಕಡೆ ಮುಖ ಮಾಡಿದ್ದಾರೆ.
ನಟ ಆರ್ಯ ಕೊನೆಯ ಬಾರಿಗೆ ಸರ್ಪಟ್ಟ ಪರಂಬರೈನಲ್ಲಿ ಕಾಣಿಸಿಕೊಂಡರು ಮತ್ತು ಇದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಂಜಿತ್ ನಿರ್ದೇಶಿಸಿದ್ದಾರೆ ಇದರಲ್ಲಿ ದುಶಾರ ವಿಜಯನ್, ಜಾನ್ ಕೊಕ್ಕನ್, ಕಲೈರಸನ್, ಪಸುಪತಿ, ಜಾನ್ ವಿಜಯ್ ಮತ್ತು ಸಂತೋಷ್ ಪ್ರತಾಪ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆರ್ಯ ಈ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷತೆಯಾಗಿದೆ. ಔಖಿಖಿ ವೇದಿಕೆಯಲ್ಲಿ ಸಿನಿಮಾ ಹಿಟ್ ಆಗಿದ್ದರ ಬೆನ್ನಲ್ಲೇ ಹೆಣ್ಣು ಮುಗು ಹುಟ್ಟಿರುವುದ ನಟ ಆರ್ಯಗೆ ಡಬಲ್ ಖುಷಿ ತಂದಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Liverpool Univesity: ಯುಕೆಯ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಮಾಡಬೇಕುನ್ನುವವರಿಗೆ Good News

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರೊಪೆಸರ್‌ಗೆ ಬಿಗ್‌ ರಿಲೀಫ್‌

Operation Sindoor ಬಳಿಕ ಮತ್ತೇ ಅಣಕು ಪ್ರದರ್ಶನದಲ್ಲಿ ತೊಡಗಿದ ಭಾರತ, ಇದರ ಅರ್ಥವೇನು

Bantwal Abdul Rahim Case: ಬಿಜೆಪಿ ಶವಗಳ ಮೇಲೆ ರಾಜಕೀಯ ಮಾಡುತ್ತಿದೆ, ದಿನೇಶ್‌ ಗುಂಡೂರಾವ್‌

Abdul Rahim Case: 15 ಮಂದಿಯ ವಿರುದ್ಧ ಬಿತ್ತು ಎಫ್‌ಐಆರ್‌, ಚುರುಕುಗೊಂಡ ತನಿಖೆ

ಮುಂದಿನ ಸುದ್ದಿ
Show comments