Webdunia - Bharat's app for daily news and videos

Install App

ಲೈಂಗಿಕ ಸುಖ ನೀಡುತ್ತಿಲ್ಲ ಎಂದ ಮಹಿಳೆಯ ಹತ್ಯೆಗೈದ ಪ್ರಿಯಕರ

Webdunia
ಗುರುವಾರ, 28 ಮಾರ್ಚ್ 2019 (18:44 IST)
ಹಲವು ವರ್ಷಗಳ ಕಾಲ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಬಂಧ ಹೊಂದಿದ್ದ ಪ್ರಿಯಕರ, ಇದೀಗ ಆಕೆ ಲೈಂಗಿಕ ಸುಖ ಕೊಡುತ್ತಿಲ್ಲ, ಮಾತನಾಡುತ್ತಿಲ್ಲ ಎನ್ನುವ ಕೋಪದ ಭರದಲ್ಲಿ ಆಕೆಯನ್ನು ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
ರಂಗಾರೆಡ್ಡಿ ಜಿಲ್ಲೆಯ ಫಾರೂಕ್‌ನಗರ್ ತಾಲೂಕಿನ ಎಲಿಕಟ್ಟ ಗ್ರಾಮದ ನಿವಾಸಿಯಾದ ಜಂಗಂ ರಾಮಲುಗೆ ಅದೇ ಉರಿನವಳಾದ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು. ಹಲವು ತಿಂಗಳುಗಳು ಕಾಲ ನಿರಂತರ ದೈಹಿಕ ದಾಹವನ್ನು ತೀರಿಸಿಕೊಂಡಿದ್ದಾರೆ. ಯಾವುದೇ ವಿಷಯಕ್ಕೆ ಪರಸ್ಪರ ಭಿನ್ನಾಭಿಪ್ರಾಯ ಎದುರಾಗಿದ್ದರಿಂದ ಇಬ್ಬರು ಕೆಲ ಕಾಲ ಬೇರೆ ಬೇರೆಯಾಗಿದ್ದರು.
 
ಕೆಲವು ದಿನಗಳಲ್ಲಿ ಸರಿಹೋಗಬಹುದು ಎಂದು ಕಾಯುತ್ತಿದ್ದ ರಾಮುಲುಗೆ ಆಕೆ ಮಾತನಾಡದಿರುವುದು, ಲೈಂಗಿಕ ಸುಖ ಕೊಡದಿರುವುದರಿಂದ ಕೋಪ ನೆತ್ತಿಗೇರಿದೆ. ಹೇಗಾದರು ಮಾಡಿ ಅವಳಿಗೆ ತಕ್ಕ ಪಾಠ ಕಲಿಸಬೇಕು ಎಂದು ತೀರ್ಮಾನಿಸಿದ್ದಾನೆ. ಕೂಲಿ ಕೆಲಸ ಮುಗಿಸಿ ಸಂಜೆ ಹೊತ್ತಿನಲ್ಲಿ ಒಂಟಿಯಾಗಿ ಮನೆಗೆ ಮರಳುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
 
ಮಹಿಳೆ ಬೆಂಕಿ ತಗಲುತ್ತಿದ್ದಂತೆ ಅದರ ಬಿಸಿ ತಾಳದೆ ಜೋರಾಗಿ ಕೂಗಿಕೊಂಡಿದ್ದಾಳೆ. ನೆರೆಹೊರೆಯವರು ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಸಾವಿನ ಮುಂಚೆ ತನ್ನ ಪ್ರಿಯಕರ ಮಾಡಿದ ಘನಕಾರ್ಯವನ್ನು ಪೊಲೀಸರಿಗೆ ತಿಳಿಸಿದ್ದಾಳೆ.
 
ಪೊಲೀಸರು ಪರಾರಿಯಾಗಿರುವ ಆರೋಪಿ ರಾಮುಲು ವಿರುದ್ಧ ಹುಡುಕಾಟ ಆರಂಭಿಸಿದ್ದು,ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಕೆಆರ್‌ 45 ಅಂಬಾಸಿಡರ್ ಕಾರಿನ ಜತೆಗಿನ ಹಿರಿಯ ನಾಯಕರ ಒಡನಾಟ ಬಿಚ್ಚಿಟ್ಟ ವಿಜಯೇಂದ್ರ

ಇಂಡಿಗೋ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಪ್ರಯಾಣಿಕನ ಅನುಚಿತ ವರ್ತನೆ, ಮುಂದೇನಾಯ್ತು ಗೊತ್ತಾ

ಬಂಗಾಳದಲ್ಲಿ ಒಬ್ಬ ಬಿಜೆಪಿ ಶಾಸಕನೂ ಇರಲ್ಲ: ವಿಧಾನಸಭೆಯಲ್ಲಿ ಗುಡುಗಿದ ಮಮತಾ ಬ್ಯಾನರ್ಜಿ

ಧರ್ಮಸ್ಥಳ ಪ್ರಕರಣ: ಅಮಿತ್ ಶಾ ಭೇಟಿಯಾದ ಸನಾತನ ಸಂತ ನಿಯೋಗ

ದಸರಾ ಉದ್ಘಾಟಕರಿಗೆ ಚಾಮುಂಡಿ ಇತಿಹಾಸ, ಆರಾಧನೆ ಮೊದಲು ತಿಳಿಸಲಿ: ವಿ ಸೋಮಣ್ಣ

ಮುಂದಿನ ಸುದ್ದಿ