Webdunia - Bharat's app for daily news and videos

Install App

ಅಮ್ಮ- ಮಾವನಿಂದ ರೇಪ್‍ಗೊಳಗಾದ ಪತ್ನಿಯನ್ನು ಹೊರಗಾಕಿದ ಪತಿ!

Webdunia
ಶುಕ್ರವಾರ, 15 ಸೆಪ್ಟಂಬರ್ 2023 (10:27 IST)
ಲಕ್ನೋ : ಸೊಸೆಯ ಮೇಲೆ ಮಾವನೇ ಅತ್ಯಾಚಾರ ಎಸಗುತ್ತಾನೆ. ಈ ವಿಚಾರ ತಿಳಿದ ಪತಿ, ನೀನು ನನಗೆ ಪತ್ನಿ ಅಲ್ಲ, ಅಮ್ಮ ಎಂದು ಹೇಳಿ ಆಕೆಯನ್ನು ಮನೆಯಿಂದ ಹೊರಗಡೆ ಹಾಕಿದ ಪ್ರಸಂಗವೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. 26 ವರ್ಷದ ತನ್ನ ಪತ್ನಿಯನ್ನು ಹೊರಗೆ ಹಾಕುವ ವೇಳೆ, ನನ್ನ ತಂದೆ ನಿನ್ನೊಂದಿಗೆ ಬಲವಂತವಾಗಿ ಸಂಬಂಧವನ್ನು ಹೊಂದಿದ್ದರಿಂದ ನೀನು ನನ್ನ ತಂದೆಯ ಪತ್ನಿಯಾಗಿರುತ್ತಿ ಮತ್ತು ನನ್ನ ‘ಅಮ್ಮಿ’ (ತಾಯಿ) ಆಗಿರುವುದರಿಂದ ನಿನ್ನನ್ನು ನನ್ನೊಂದಿಗೆ ಇರಲು ಬಿಡುವುದಿಲ್ಲ ಎಂದು ಹೇಳಿದ್ದಾನೆ.

ಈ ಸಂಬಂಧ ಮಹಿಳೆ ಸೆಪ್ಟೆಂಬರ್ 7 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತನಗೆ ಕಳೆದ ವರ್ಷ ಮದುವೆಯಾಗಿದೆ. ಆದರೆ ಆಗಸ್ಟ್ 5ರಂದು ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮಾವ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದಿದ್ದಾರೆ. 

ಅತ್ತೆಯನ್ನು ನನ್ನ ಪತಿ ಔಷಧಿಗೆಂದು ಹೊರಗಡೆ ಕರೆದುಕೊಂಡು ಹೋಗಿದ್ದರು. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡ ಮಾವ ನನ್ನ ಮೇಲೆ ರೇಪ್ ಮಾಡಿದ್ದಾರೆ.

ಅಲ್ಲದೆ ಈ ಬಗ್ಗೆ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿ, ನನಗೆ ಥಳಿಸಿದ್ದಾರೆ. ಇನ್ನು ಈ ವಿಚಾರವನ್ನು ಪತಿ ಬಳಿ ವಿವರಿಸಿದೆ. ಆದರೆ ಅವರು ಸಿಟ್ಟಿಗೆದ್ದು, ನೀನು ನನಗೆ ಅಮ್ಮನಾಗುತ್ತೀಯಾ.. ಪತ್ನಿ ಅಲ್ಲ ಎಂದು ಹೇಳಿ ಮನೆಯಿಂದ ಹೊರಗಡೆ ಹಾಕಿದ್ದಾರೆ. ಸದ್ಯ ಪೋಷಕರ ಜೊತೆ ವಾಸವಾಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvanshi murder: ಗಂಡನ ಕೊಲೆ ಮಾಡಿದ ಸೋನಂ ಅದೊಂದನ್ನು ಮಾತ್ರ ಬಿಟ್ಟು ಹೋಗಿದ್ದಳು

Pradeep Eshwar: ಮೋದಿ 11 ವರ್ಷದಲ್ಲಿ ಕಡಿದು ಕಟ್ಟೆ ಹಾಕಿದ್ದಾರೆ ಬಿಡ್ರಿ: ಪ್ರದೀಪ್ ಈಶ್ವರ್

ಕುರ್ಚಿ ಉಳಿಸಿಕೊಳ್ಳಲು ಭಾರತದ ಜೊತೆಗೇ ಯುದ್ಧ ಮಾಡಲು ಹೊರಟಿದ್ದರಂತೆ ಬಾಂಗ್ಲಾ ಪ್ರಧಾನಿ ಯೂನಸ್

ಮುಂದಿನ ಸುದ್ದಿ
Show comments