ಲಕ್ನೋ : ಇತ್ತೀಚಿನ ದಿನಗಳಲ್ಲಿ ವಿವಾಹ ಕಾರ್ಯಕ್ರಮಗಳು ವಿಚಿತ್ರ ಕಾರಣಗಳಿಂದ ನಿಲ್ಲುತ್ತಿವೆ. ಮಂಟಪದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ ಕೊನೆ ಗಳಿಗೆಯಲ್ಲಿ ಮದುವೆಯನ್ನು ನಿಲ್ಲಿಸಲಾಗುತ್ತದೆ.
ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ನೌಗಢ ಪ್ರದೇಶದಲ್ಲಿ ನಡಟೆದಿದೆ. ಮದುವೆ ವೇಳೆ ಗಲಾಟೆ ನಡೆದಿದ್ದು, ತಾಳಿ ಕಟ್ಟುವ ಮುನ್ನವೇ ನಶೆಯಲ್ಲಿದ್ದ ವರನ ಸ್ಥಿತಿ ನೋಡಿ ವಧು ತಾನೂ ಆತನನ್ನು ವಿವಾಹವಾಗುವುದಿಲ್ಲ ಎಂದು ಹೇಳಿದ್ದಾಳೆ.
ಮದುವೆ ದಿನವೂ ಕಂಠಪೂರ್ತಿ ಕುಡಿದು ಬಂದಿದ್ದರಿಂದ ವಧು ಕುಪಿತಗೊಂಡ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ತಿಳಿದುಬಂದಿದೆ.
ಅಲ್ಲದೆ ಮದುವೆ ಮನೆಗೆ ಕುಡಿದು ಬಂದ ವರ ಹಾಗೂ ವರನ ಕಡೆಯವರನ್ನು ಹುಡುಗಿಯ ಕಡೆಯ ಜನರು ಇಡೀ ಒತ್ತೆಯಾಳಾಗಿ ತೆಗೆದುಕೊಂಡಿದ್ದಾರೆ. ನಂತರ ಎರಡು ಗುಂಪಿನ ಜನರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಮಧ್ಯ ಪ್ರವೇಶಿಸಿದ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆತಂದು ಸಮಾಧಾನ ಪಡಿಸಿ ಅವರವರ ಊರಿಗೆ ಕಳುಹಿಸಿದ್ದಾರೆ.
ವಾಸ್ತವವಾಗಿ, ಮಿರ್ಜಾಪುರ ಜಿಲ್ಲೆಯ ಅಹಿರೌರಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಕ್ಪುರ ಗ್ರಾಮದಿಂದ ವರ ಮೆರವಣಿಗೆ ಮೂಲಕ ತೆಂಡುವಾ ಗ್ರಾಮಕ್ಕೆ ಆಗಮಿಸಿದ್ದ. ಗ್ರಾಮದ ಜನರು ವರನ ಕಡೆಯವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ, ಸತ್ಕರಿಸಿ ವಿವಾಹ ಪೂರ್ವದ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಮಾಲೆ ಹಾಕುವ ವೇಳೆ ಮದುಮಗ ಅಸಭ್ಯವಾಗಿ ವರ್ತಿಸಿದ್ದಾನೆ. ಹುಡುಗಿಯ ಹಣೆಗೆ ಕುಂಕುಮ ಇಡುವ ಬದಲು ಆಕೆಯ ಮುಖಕ್ಕೆ ಸಿಂಧೂರ ಹಚ್ಚಿದ್ದಾನೆ. ಈ ಘಟನೆ ನಂತರ ಹುಡುಗಿ ಕೋಪದಿಂದ ಮಂಟಪದಿಂದ ಎದ್ದು ಹೋಗಿದ್ದಾಳೆ.
ಮೆರವಣಿಗೆಯ ಮೂಲಕ ವರ ಮತ್ತು ಇತರ ಸಂಬಂಧಿಕರು ಮದುವೆ ಸಮಾರಂಭಕ್ಕಾಗಿ ಮದುವೆಯ ಮಂಟಪವನ್ನು ತಲುಪಿದ್ದರು. ಆದರೆ ಅಷ್ಟರಲ್ಲಾಗಲೇ ಅವರೆಲ್ಲಾ ಸಿಕ್ಕಾಪಟ್ಟೆ ಕುಡಿದಿದ್ದರು. ಸ್ವಲ್ಪ ಹೊತ್ತಿನಲ್ಲಿ ವಧುವಿನ ಕಡೆಯವರು ಮಂಟಪಕ್ಕೆ ಬಂದಿದ್ದಾರೆ.
ಕೆಲವು ಆಚರಣೆಗಳ ನಂತರ, ಪಂಡಿತರು ಸಿಂಧೂರ ದಾನ ಮಾಡುವ ವಿಧಿ ವಿಧಾನವನ್ನು ಹೇಳಿದಾಗ, ಕುಡುಕ ವರ ನಿಯಂತ್ರಣ ಕಳೆದು ತೂರಾಡಿದ್ದಾನೆ, ಅಲ್ಲದೆ ವಧುವಿನ ಮುಖದ ಮೇಲೆ ಕುಂಕುಮವನ್ನ ಎರಚತೊಡಗಿದ್ದಾನೆ. ಇದು ವಧುವಿನ ಕೋಪಕ್ಕೆ ಕಾರಣವಾಗಿದೆ.