Select Your Language

Notifications

webdunia
webdunia
webdunia
webdunia

ಮಾಂಝಿಗೆ ಬಿಜೆಪಿ ಬೆಂಬಲ ಸಿಕ್ಕಿದರೂ ವಿಶ್ವಾಸ ಮತ ದಕ್ಕುವುದು ಕಷ್ಟ

ಮಾಂಝಿಗೆ ಬಿಜೆಪಿ ಬೆಂಬಲ ಸಿಕ್ಕಿದರೂ ವಿಶ್ವಾಸ ಮತ ದಕ್ಕುವುದು  ಕಷ್ಟ
ಪಾಟ್ನಾ , ಗುರುವಾರ, 19 ಫೆಬ್ರವರಿ 2015 (12:35 IST)
ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ವಿಶ್ವಾಸ ಮತ ಯಾಚನೆ ನಾಳೆ ನಡೆಯಲಿದ್ದು, ಬಿಜೆಪಿ ಮಾಂಝಿಗೆ  ಬೆಂಬಲಿಸುವುದೆಂದು ನಿರೀಕ್ಷಿಸಲಾಗಿದೆ. ವಿಶ್ವಾಸ ಮತಯಾಚನೆಯು ಮಾಂಝಿಯ ಬದಲಿಗೆ ಅವರ ಮುಂಚಿನ ಬಾಸ್ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗುತ್ತಾರೋ ಇಲ್ಲವೋ ಎನ್ನುವುದನ್ನು ನಿರ್ಧರಿಸುತ್ತದೆ.

ಮಾಂಝಿಗೆ ಮುಖ್ಯಮಂತ್ರಿಯಾಗಿ ಉಳಿಯಲು 117 ಮತಗಳ ಅಗತ್ಯವಿದ್ದು, ಬಿಹಾರದ ಬಿಜೆಪಿ ಅವರಿಗೆ ಬೆಂಬಲಿಸಲು ನಿರ್ಧರಿಸಿದರೆ ಪಕ್ಷದ 87 ಮತಗಳ ಬೆಂಬಲ ಸಿಗುತ್ತದೆ. ಬಿಜೆಪಿ ತನ್ನ ಯೋಜನೆ ಬಗ್ಗೆ 6 ಗಂಟೆಗೆ ಸೂಚನೆ ನೀಡಲಿದೆ.ಮಾಂಝಿ ಅವರಿಗೆ ಕೇವಲ 12 ಜೆಡಿಯು ಶಾಸಕರ ಬೆಂಬಲವಿದೆ. ಬಿಜೆಪಿ ಬೆಂಬಲ ಪಡೆದರೂ ಕೂಡ ವಿಶ್ವಾಸಮತದಲ್ಲಿ ಜಯಗಳಿಸುವುದು ಕಷ್ಟವಾಗಲಿದೆ.

ನಿತೀಶ್ ಕುಮಾರ್ 120 ಮತಗಳನ್ನು ಗಳಿಸುವುದಕ್ಕೆ ಸಾಧ್ಯವಾಗುವ ಮೂಲಕ ಅವರು ಮುಖ್ಯಮಂತ್ರಿಯಾಗಬಹುದು.ಮಾಂಝಿ ಮಹಾದಲಿತ ಜಾತಿಗೆ ಸೇರಿದ್ದು, ರಾಜಕೀಯ ಪಕ್ಷಗಳಿಗೆ  ಈ ಜಾತಿಯ ಬೆಂಬಲದ ಅಗತ್ಯವಿದೆ. ಮಹಾದಲಿತ ನಾಯಕನಿಗೆ ತಮ್ಮ ಪಕ್ಷ ಬೆಂಬಲಿಸುತ್ತಿದೆಯೆಂದು ಬಿಂಬಿಸಲು ಬಿಜೆಪಿ ಬಯಸಿದೆ. ಮಾಂಝಿ ಅವರ ಬಂಡಾಯಕ್ಕೆ ಬಿಜೆಪಿ ಮುನ್ನುಡಿ ಬರೆದಿದೆ ಎಂದು ಏತನ್ಮಧ್ಯೆ ನಿತೀಶ್ ಕುಮಾರ್ ಆರೋಪಿಸಿದ್ದಾರೆ. 
 

Share this Story:

Follow Webdunia kannada