Select Your Language

Notifications

webdunia
webdunia
webdunia
webdunia

ಕಲಾಂ ಗೌರವಾರ್ಥ ಮೋದಿ ವಿರುದ್ಧದ ಪ್ರಚಾರ ಫಲಕಗಳನ್ನು ತೆರವುಗೊಳಿಸಿದ ಆಪ್

ಕಲಾಂ ಗೌರವಾರ್ಥ ಮೋದಿ ವಿರುದ್ಧದ ಪ್ರಚಾರ ಫಲಕಗಳನ್ನು ತೆರವುಗೊಳಿಸಿದ ಆಪ್
ನವದೆಹಲಿ , ಬುಧವಾರ, 29 ಜುಲೈ 2015 (17:04 IST)
ಅಚಾನಕ್ ಆಗಿ ಮರಣವನ್ನಪ್ಪಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಗೌರವಾರ್ಥ ಸೂಚಿಸುವ ಸಲುವಾಗಿ ಪ್ರಧಾನಿ ಮೋದಿ ವಿರುದ್ಧ ನಡೆಸುತ್ತಿದ್ದ ಆಕ್ರಮಣಕಾರಿ ಜಾಹೀರಾತು ಪ್ರಚಾರವನ್ನು ಆಮ್ ಆದ್ಮಿ ಸರ್ಕಾರ ಬುಧವಾರ ಹಿಂಪಡೆದಿದೆ.
 
ಅಗಲಿದ ಆತ್ಮಕ್ಕೆ ಗೌರವ ಸಲ್ಲಿಸಲು ಮೋದಿ ವಿರುದ್ಧ ಪ್ರಚಾರ ನಡೆಸುವ ಉದ್ದೇಶದಿಂದ ತೂಗು ಹಾಕಲಾಗಿದ್ದ ಎಲ್ಲಾ ಪೋಸ್ಟರ್,ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಆಪ್ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.
 
ಕೇಂದ್ರ ಸರ್ಕಾರ ದೆಹಲಿಯ ಆಡಳಿತ ನಡೆಸಲು ಆಮ್ ಆದ್ಮಿ ಪಕ್ಷಕ್ಕೆ ಅಡೆತಡೆಗಳನ್ನುಂಟು ಮಾಡುತ್ತಿದೆ. ಪ್ರಧಾನಿಯವರೇ ದೆಹಲಿ ಆಡಳಿತ ನಡೆಸಲು ನಮಗೆ ಅವಕಾಶ ನೀಡಿ ಎಂದು ಬರೆದು ಆಪ್ ಸರ್ಕಾರ ಮೋದಿ ವಿರುದ್ಧ ಜಾಹೀರಾತು ಪ್ರಚಾರ ಆರಂಭಿಸಿತ್ತು.
 
ಆಮ್ ಆದ್ಮಿ ಸರ್ಕಾರ ಸಾರ್ವಜನಿಕರ ಹಣವನ್ನು ತಮ್ಮ ಪಕ್ಷದ ಜಾಹೀರಾತುಗಳಿಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಲಾಂ ನಿಧನದ ಸಂದರ್ಭವನ್ನು ಬಳಸಿಕೊಂಡು ಜಾಹೀರಾತು ವಿವಾದನ್ನು ತಣ್ಣಗಾಗಿಸಲು ಆಪ್ ಈ ನಿರ್ಧಾರವನ್ನು ಕೈಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

Share this Story:

Follow Webdunia kannada