48 ಗಂಟೆಗಳಲ್ಲಿ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷೆ

Webdunia
ಸೋಮವಾರ, 20 ಫೆಬ್ರವರಿ 2023 (17:14 IST)
ಉತ್ತರ ಕೊರಿಯಾವು ಕಳೆದ 48 ಗಂಟೆಗಳಲ್ಲಿ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗವನ್ನು ನಡೆಸಿದೆ. ಉತ್ತರ ಕೊರಿಯಾ ಮತ್ತೊಮ್ಮೆ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ. ದಕ್ಷಿಣ ಕೊರಿಯಾದ ಪ್ರಕಾರ, ಉತ್ತರ ಕೊರಿಯಾ ತನ್ನ ಪೂರ್ವ ಸಮುದ್ರದ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದೆ. ಸೋಮವಾರ ಬೆಳಗ್ಗೆ ಉಡಾವಣೆ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಹೇಳಿದ್ದಾರೆ. ಯುಎಸ್-ದಕ್ಷಿಣ ಕೊರಿಯಾ ಜಂಟಿ ವಾಯು ಅಭ್ಯಾಸದ ನಂತರ ಉತ್ತರ ಕೊರಿಯಾ ಪೂರ್ವ ಸಮುದ್ರದ ಕಡೆಗೆ ಎರಡು ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. 48 ಗಂಟೆಗಳಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಉತ್ತರ ಕೊರಿಯಾದ ಸುಖೋನ್ ಪ್ರದೇಶದಿಂದ ಬೆಳಿಗ್ಗೆ 7 ಗಂಟೆಗೆ ಉಡಾವಣೆ ಪತ್ತೆಯಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ. 395 ಕಿಮೀ ಮತ್ತು 337 ಕಿಮೀ ದೂರದ ಗುರಿಗಳ ಮೇಲೆ ಎರಡು ಸ್ಪೋಟಕಗಳನ್ನು ಹಾರಿಸಿರುವುದಾಗಿ ಉತ್ತರ ಕೊರಿಯಾ ಹೇಳಿದೆ. B-1B ಸ್ಟ್ರಾಟೆಜಿಕ್ ಪಾಲುದಾರಿಕೆಯ ಭಾಗವಾಗಿ ಯುಎಸ್ ಮತ್ತು ದಕ್ಷಿಣ ಕೊರಿಯಾ ಭಾನುವಾರ ಜಂಟಿ ಏರ್ ಡ್ರಿಲ್ಗಳನ್ನು ನಡೆಸಿದ ಒಂದು ದಿನದ ನಂತರ ಉತ್ತರ ಕೊರಿಯಾ ಪರೀಕ್ಷೆ ನಡೆಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ನಾನೇ ಸಿಎಂ, 2028 ಕ್ಕೂ ನಾವೇ ಅಧಿಕಾರಕ್ಕೆ ಬರೋದು: ಸದನದಲ್ಲಿ ಸಿದ್ದರಾಮಯ್ಯ ಮಹತ್ವದ ಘೋಷಣೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ತಂದೆ ಪ್ರೀತಿಗೆ ಧನ್ಯವಾದಗಳು: ಪ್ರಧಾನಿ ಮೋದಿ ಹುಟ್ಟುಹಬ್ಬದ ಸಂದೇಶಕ್ಕೆ ಕುಮಾರಸ್ವಾಮಿ ಭಾವುಕ

ಮುಂದಿನ ಸುದ್ದಿ
Show comments