Webdunia - Bharat's app for daily news and videos

Install App

ಬಿಸಿಯೂಟದ ಸಾಂಬಾರ್‌ನಲ್ಲಿ ಬಿದ್ದು ಬಾಲಕ ಸಾವು

Webdunia
ಭಾನುವಾರ, 25 ಡಿಸೆಂಬರ್ 2016 (11:47 IST)
ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕಾಗಿ ತಯಾರಿಸುತ್ತಿದ್ದ ಸಾಂಬಾರ್‌ನಲ್ಲಿ ಬಿದ್ದು 5 ವರ್ಷದ ಬಾಲಕ ದುರ್ಮರಣವನ್ನಪ್ಪಿದ ದಾರುಣ ಘಟನೆ ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. 

ಇದುಲೂರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು ಬಾಲಕ ಜನಾರ್ಧನ ಒಂದನೆಯ ತರಗತಿಯಲ್ಲಿ ಓದುತ್ತಿದ್ದು, ಶುಕ್ರವಾರ ಮಧ್ಯಾಹ್ನ ಊಟ ಮಾಡಲೆಂದು ಗೆಳೆಯರ ಜತೆಯಲ್ಲಿ ಸರತಿ ಸಾಲಲ್ಲಿ ನಿಂತಿದ್ದ. ಆತನ ಹಿಂದೆ ನಿಂತವರಲ್ಲಿ ಯಾರೋ ದೂಡಿದಾಗ ಆತ ನೇರವಾಗಿ ಸಾಂಬಾರ್ ಪಾತ್ರೆಗೆ ಬಿದಿದ್ದಾನೆ.
 
70 ಪ್ರತಿಶತ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆತನನ್ನು ನಲಗೊಂಡಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತನ ಸ್ಥಿತಿ ಗಂಭೀರವಾಗಿದ್ದರಿಂದ ಹೈದರಾಬಾದ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಆತ ಕೊನೆಯುಸಿರೆಳೆದಿದ್ದಾನೆ.
 
ಬಾಲಕನ ಅಜ್ಜ ನೀಡಿರುವ ದೂರಿನಂತೆ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದ ಮೂವರು ಮಹಿಳೆಯರ ವಿರುದ್ಧ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕಟಂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಲೆಯ ಮುಖ್ಯೋಧ್ಯಾಪಕನನ್ನು ಅಮಾನತು ಮಾಡಲಾಗಿದೆ. 
 
ಮೃತನ ಕುಟುಂಬಕ್ಕೆ ಜಿಲ್ಲಾಧಿಕಾರಿ 2 ಲಕ್ಷ ರೂಪಾಯಿ ಪರಿಹಾರ ಧನ, ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ಮತ್ತು ಒಂದು ನಿವೇಶನವನ್ನು ಘೋಷಿಸಿದ್ದಾರೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor ಟಾರ್ಗೆಟ್ ಏನಾಗಿತ್ತು ಎಂದು ಬಹಿರಂಗಪಡಿಸಿದ ಪ್ರಧಾನಿ ಮೋದಿ

Karnataka: ಭಾರತೀಯ ಸೇನೆಗಾಗಿ ಬಿಜೆಪಿಯಿಂದ ಪಕ್ಷಾತೀತ ತಿರಂಗಾ ಯಾತ್ರೆ

Nuclear leak: ಪಾಕಿಸ್ತಾನದಲ್ಲಿ ಈಗ ಎಲ್ಲರಿಗೂ ವಾಂತಿ, ತಲೆನೋವು: ಎಲ್ಲಾ ಭಾರತೀಯ ಸೇನೆ ಇಫೆಕ್ಟ್

Operation Kellar: ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ್ದ ಮೂವರು ಉಗ್ರರು ಫಿನಿಶ್

PM Modi: ಆದಂ ಪುರ ವಾಯುನೆಲೆಗೆ ಮೋದಿ ಸರ್ಪ್ರೈಸ್ ಭೇಟಿ, ಸೆಲ್ಫೀಗೆ ಪೋಸ್

ಮುಂದಿನ ಸುದ್ದಿ
Show comments