Select Your Language

Notifications

webdunia
webdunia
webdunia
webdunia

ಅಪ್ಪ ಅಮ್ಮನ ಜಗಳ: ತಂಗಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಅಪ್ಪ ಅಮ್ಮನ ಜಗಳ: ತಂಗಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ
ಇಂದೋರ್ , ಭಾನುವಾರ, 14 ಡಿಸೆಂಬರ್ 2014 (16:43 IST)
ಅಪ್ಪ ಅಮ್ಮನ ಜಗಳದ ಕಾವು ಮಕ್ಕಳಿಗೂ ತಟ್ಟಿದ ಪ್ರಕರಣವಿದು. ಸದಾ ಜಗಳವಾಡುತ್ತಿದ್ದ ತಂದೆ- ತಾಯಿಗಳ ವರ್ತನೆಯಿಂದ ಬೇಸತ್ತ ಬಾಲಕನೊಬ್ಬ ತನ್ನ ತಂಗಿಯನ್ನು ಕೊಂದು ತಾನು ಸಹ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾಯಕ ಘಟನೆ  ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

 
ಮೂಲಗಳ ಪ್ರಕಾರ ಬಾಲಕನ ತನ್ನ ಪಾಲಕರ ದಿನನಿತ್ಯ ಜಗಳದಿಂದ ಖಿನ್ನತೆಗೊಳಗಾಗಿದ್ದ. ಶನಿವಾರ ರಾತ್ರಿ ತನ್ನ ತಂಗಿಯ ಜತೆ ಜಗಳವಾಡಿದ ಆತ ಕೋಪದ ಭರದಲ್ಲಿ ಆಕೆಯನ್ನು ಕೊಂದು ತಾನು ಜೀವ ತ್ಯಜಿಸಿದ್ದಾನೆ ಎಂದು ತಿಳಿದುಬಂದಿದೆ.
 
2 ವರ್ಷದ ತನ್ನ ತಂಗಿಯ ಎರಡು ಕಣ್ಣುಗಳನ್ನು ಕಿತ್ತ 14 ವರ್ಷದ ಹುಡುಗ ಆಕೆಯ ಕುತ್ತಿಗೆಯನ್ನು ಹಿಸುಕಿ  ಸಾಯಿಸಿದ್ದಾನೆ. ನಂತರ ಅಮ್ಮನ  ವೇಲ್ ಬಳಸಿಕೊಂಡು ತಾನು ಕೂಡ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಆಸ್ಪತ್ರೆಯಲ್ಲಿ ಮಕ್ಕಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಾಗ ಅಲ್ಲೂ ಸಹ  ಅವರ ಪಾಲಕರು  ದುರಂತ ಸಾವಿಗೆ ಪರಷ್ಪರರನ್ನು ದೂಷಿಸಿ ಜಗಳವಾಡಲು ಪ್ರಾರಂಭಿಸಿದರು ಎಂದು ಪೋಲಿಸರು ತಿಳಿಸಿದ್ದಾರೆ. 
 
ಮಕ್ಕಳಿಬ್ಬರ ಶವ ಶಾಲಾ ಸಮವಸ್ತ್ರದಲ್ಲೇ ಸಿಕ್ಕಿದೆ ಎಂದು ತಿಳಿದು ಬಂದಿದೆ. ಖಜರಾನಾ ಕ್ಷೇತ್ರದ ರೋಶನ್ ನಗರದಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada