Select Your Language

Notifications

webdunia
webdunia
webdunia
webdunia

15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಕಾಮುಕ

15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಕಾಮುಕ
ಪಾಲ್ಗರ್ , ಮಂಗಳವಾರ, 26 ಮೇ 2015 (16:52 IST)
ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ. ತಲಸರಿ ಎಂಬ ಗ್ರಾಮದಲ್ಲಿ ಈ ಕೀಚಕ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಶನಿವಾರ ರಾತ್ರಿ ತನ್ನ ತಾಯಿಯೊಂದಿಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಬಾಲಕಿ ಸಮಾರಂಭ ನಡೆದ ಕಟ್ಟಡದ ಹೊರಗೆ ನಿಂತಿದ್ದಳು. ಆಕೆಯ ತಾಯಿ ಒಳಗಡೆ ಇದ್ದಳು. ಆ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಎಳೆದೊಯ್ದು ಅಜ್ಞಾತ ಸ್ಥಳದಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ತಲಸರಿ ಪೊಲೀಸ್ ಠಾಣೆಯ ಸಬ್- ಇನ್ಸಪೆಕ್ಟರ್ ಎಎಮ್ ಮುಲ್ಲಾ ತಿಳಿಸಿದ್ದಾರೆ. 
 
ಪೋಸ್ಕೋ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ. 

Share this Story:

Follow Webdunia kannada