Webdunia - Bharat's app for daily news and videos

Install App

ಮೊಬೈಲ್ ನಂಬರ್‌ಗೆ ಬಹುಮಾನ: 11 ಲಕ್ಷ ಕಳೆದುಕೊಂಡ ಟೆಕ್ಕಿ ಪತ್ನಿ ಆತ್ಮಹತ್ಯೆ

Webdunia
ಬುಧವಾರ, 29 ಜೂನ್ 2016 (15:48 IST)
ನಿಮ್ಮ ಮೊಬೈಲ್ ನಂಬರ್‌ಗೆ 25 ಲಕ್ಷ ಬಹುಮಾನ ಬಂದಿದೆ. ಇಂತಹ ಸಂದೇಶಗಳು ನಿಮ್ಮ ಮೊಬೈಲ್‌ಗೆ ಬಂದಿರಲಿಕ್ಕೆ ಸಾಕು. ಸೈಬರ್ ಅಪರಾಧ ಲೋಕದ ವಂಚನೆಯ ಜಾಲಗಳಲ್ಲೊಂದಿದು. ಇಂತಹ ವಂಚನೆಗೊಳಗಾಗಿ 11 ಲಕ್ಷ ಕಳೆದುಕೊಂಡ ಟೆಕ್ಕಿಯ ಪತ್ನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಹೇಯ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. 

ಬೆಂಗಳೂರಿನ ವಿವೇಕಾನಂದ ರಸ್ತೆಯ ನಿವಾಸಿ 44 ವರ್ಷದ ಪಲಕ್ ವಿ ಮೃತ ದುರ್ವೈವಿಯಾಗಿದ್ದಾಳೆ. 
 
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ನಿಮ್ಮ ಮೊಬೈಲ್ ನಂಬರ್ 45 ಲಕ್ಷ ರೂಪಾಯಿಯನ್ನು ಗೆದ್ದಿದೆ ಪಲಕ್ ಅವರ ಮೊಬೈಲ್‌ಗೆ ಕಳೆದ ವಾರ  ಮೆಸೇಜ್ ಬಂದಿದೆ. ಇದರ ಹಿಂದಿನ ವಂಚನೆಯ ಬಗ್ಗೆ ಅರಿವಿರದ ಆಕೆ ನಿಜವೆಂದು ಬಗೆದು ಆ ನಂಬರ್‌ಗೆ ಫೋನ್ ಕರೆ ಮಾಡಿದ್ದಾಳೆ. ತನ್ನನ್ನು  ಆ್ಯಂಡ್ರೂ ಎಂದು ಪರಿಚಯಿಸಿಕೊಂಡ ವ್ಯಕ್ತಿ  ಹಣ ವರ್ಗಾವಣೆಗೆ ಕಸ್ಟಮ್ಸ್ ಮತ್ತು ಕೆಲ ಕಾನೂನು ತೊಡಕುಗಳಿದ್ದು, ಅದನ್ನು ಪರಿಹರಿಸಲು 11 ಲಕ್ಷ ಹಣವನ್ನು ನೀಡುವಂತೆ ಕೇಳಿದ್ದಾನೆ. ಇದನ್ನು ನಂಬಿದ ಆಕೆ ಈ ವಿಷಯವನ್ನು ಹಿರಿಯ ಐಟಿ ಉದ್ಯೋಗಿಯಾಗಿರುವ ತನ್ನ ಪತಿ ಮತ್ತು ಮಕ್ಕಳಿಗೆ ಕೂಡ ತಿಳಿಸದೇ ಆತ ನೀಡಿದ ನಾಲ್ಕು ಬ್ಯಾಂಕ್ ಖಾತೆಗಳಿಗೆ ಜೂನ್ 6ರಿಂದ 13ರವರೆಗೆ ಸುಮಾರು 11 ಲಕ್ಷ ಹಣ ವರ್ಗಾಯಿಸಿದ್ದಾಳೆ.
 
ಕೊನೆಗೆ ದೆಹಲಿಗೆ ಡಿಮಾಂಡ್ ಡ್ರಾಫ್ಟ್ ತೆಗೆದುಕೊಂಡು ಹೋಗುವಂತೆ ಹೇಳಿದ್ದಾನೆ. ಕೊನೆಗೂ ಹಣ ಸಿಕ್ಕಿತು ಎಂದು ಮುಂಬೈಗೆ ಹೋದ ಮಹಿಳೆ ಆತನಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಪ್ ಬಂದಿದೆ. ಆಗಲೇ ಅವಳಿಗೆ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಇದರಿಂದ ಆಘಾತಕ್ಕೊಳಗಾದ ಆಕೆ ಹಿಂತಿರುಗಿ ಬಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments