Webdunia - Bharat's app for daily news and videos

Install App

ಪಳನಿ ಪದಗ್ರಹಣ ನೋಡುತ್ತಾ ಉದುರಿತು ಶಶಿಕಲಾ ಕಣ್ಣಹನಿ

Webdunia
ಶುಕ್ರವಾರ, 17 ಫೆಬ್ರವರಿ 2017 (12:17 IST)
ಜೈಲುಪಾಲಾಗಿ ಮುಖ್ಯಮಂತ್ರಿ ಗಾದಿಯನ್ನೇರುವ ಕನಸನ್ನು ಕಳೆದುಕೊಂಡಿರುವ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ನಿನ್ನೆ ಜೈಲಿನಿಂದಲೇ ತಮ್ಮ ಬೆಂಬಲಿಗ ಪಳನಿಸ್ವಾಮಿ ಪ್ರಮಾಣವಚನ ಸ್ವೀಕರಿಸುವುದನ್ನು ನೋಡಿದರು. ದೂರದರ್ಶನದಲ್ಲಿ ಪ್ರಮಾಣವಚನ ಸಮಾರಂಭವನ್ನು ವೀಕ್ಷಿಸುತ್ತಿದ್ದ ಅವರ ಕಣ್ಣಿಂದ ನೀರು ಹನಿಹನಿಯಾಗಿ ಇಳಿಯುತ್ತಿತ್ತು. ತಮ್ಮ ಬೆಂಬಲಿಗ ಸಿಎಂ ಗಾದಿಯನ್ನೇರುತ್ತಿರುವ ಬಗ್ಗೆ ಸಮಾಧಾನವಿದ್ದರೂ,  ಇದು ತಮ್ಮ ಕನಸು ಇತರರ ಪಾಲಾಗುತ್ತಿರುವುದರ ದುಃಖದ ಪ್ರತೀಕದಂತಿದ್ದು ಅವರ ಮೌನಶೋಕ.

ತಮ್ಮ ಅತ್ತಿಗೆ ಇಳವರಸಿ ಮತ್ತು ಇತರ ಸಹಕೈದಿಗಳ ಜತೆಯಲ್ಲಿ ಪಳನಿಸ್ವಾಮಿ ಮತ್ತು ಇತರ 30 ಬೆಂಬಲಿಗರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದನ್ನು ಶಶಿಕಲಾ ಕಣ್ಣೀರುತ್ತಾ ನೋಡಿದರು ಎಂದು ಹೆಸರು ಹೇಳಲು ಬಯಸದ ಜೈಲು ಅಧಿಕಾರಿಗಳು ಹೇಳಿದ್ದಾರೆ. 
 
ಇನ್ನು ಅಕ್ರಮ ಆಸ್ತಿ ಪ್ರಕರಣದಡಿಯಲ್ಲಿ ಜೈಲು ಸೇರಿರುವ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಮೇಲೆ ಜೈಲಿನಲ್ಲಿ ಹಲ್ಲೆಯಾಗುವ ಭೀತಿ ಇರುವುದರಿಂದ ಅವರಿರುವ ಸೆಲ್‌ಗೆ ಬಿಗಿ ಭದ್ರತೆ ನೀಡಲಾಗಿದೆ.ಜೈಲಿನಲ್ಲಿರುವ ತಮಿಳು ಖೈದಿಗಳಿಂದ ಶಶಿಕಲಾ ಅವರಿಗೆ ಜೀವ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.
 
ಹೇಗಿತ್ತು ಶಶಿಕಲಾ ದಿನಚರಿ :ಇಂದು ಮುಂಜಾನೆ 6 ಗಂಟೆಗೆ ಹಾಸಿಗೆಯಿಂದ ಎದ್ದ ಶಶಿಕಲಾ 6.30ರವರೆಗೆ ಯೋಗಾಭ್ಯಾಸ ನಡೆಸಿದರು. ಬಳಿಕ ಜೈಲಿನ ಮೆನುವಿನಂತೆ ಟೀ ಕುಡಿದು ಟೊಮೆಟೋ ಬಾತ್ ಸೇವಿಸಿದ ಅವರೀಗ ಪಳನಿಸ್ವಾಮಿ ಭೇಟಿಗೆ ಕಾದು ಕುಳಿತಿದ್ದಾರೆ.
 
ಪಳನಿಸ್ವಾಮಿ ಜತೆ ನಿನ್ನೆ ಅಧಿಕಾರ ಸ್ವೀಕರಿಸಿರುವ ಇತರ ಸಚಿವರು ಸಹ ಆಗಮಿಸುವ ಸಾಧ್ಯತೆಗಳಿವೆ.
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments