Select Your Language

Notifications

webdunia
webdunia
webdunia
webdunia

ಅರ್ಧಡಜನ್‌ ವಿಧ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ ಮಾಡಿದ ಶಿಕ್ಷಕ

ಅರ್ಧಡಜನ್‌ ವಿಧ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ ಮಾಡಿದ ಶಿಕ್ಷಕ
ಜಯಪುರ , ಸೋಮವಾರ, 28 ಜುಲೈ 2014 (19:12 IST)
ರಾಜಸ್ಥಾನದ ಬಿಕನೇರ್ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯ ಅಧ್ಯಾಪಕ ಮಕ್ಕಳಿಗೆ ಲೈಂಗಿಕ್ ಕಿರುವುಳ ನೀಡಿದ ಪ್ರಕರಣ ಬಹಿರಂಗವಾಗಿದೆ. 
 
ಶಾಲೆಯ ಒಬ್ಬ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕನ ಲೈಂಗಿಕ ಶೋಷಣೆಯ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ ಶಾಲೆಯ ಇತರ ವಿದ್ಯಾರ್ಥಿನಿಯರು ಕೂಡಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
 
ವಿದ್ಯಾರ್ಥಿನಿಯರ ಹೇಳಿಕೆಯಿಂದ ಆಕ್ರೋಶಗೊಂಡ ಸ್ಥಳೀಯ ಜನರು ಶಾಲೆಗೆ ನುಗ್ಗಿ ಆರೋಪಿ ಶಿಕ್ಷಕನಿಗೆ ಮನಂಬಂದಂತೆ ಥಳಿಸಿ ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ. 
 
ಗಜನೇರ್‌ ಠಾಣೆಯಲ್ಲಿ ಆರೋಪಿ ಶಿಕ್ಷಕ್ಷ ಸಂಜಯ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿದ್ದು ಶಾಲೆಯ  ಶಾಲೆಯ ಏಳು ಜನ ಮಕ್ಕಳು ದೂರು ದಾಖಲಿಸಿದ್ದಾರೆ. ಇತರ ವಿದ್ಯಾರ್ಥಿನಿಯರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆರೋಪಿ ಶಿಕ್ಷಕ ಮಕ್ಕಳನ್ನು ಮೀನಿಗೆ ಹಿಟ್ಟು ತಿನ್ನಿಸಲು ಕರೆದುಕೊಂಡು ಹೋಗುತ್ತಿದ್ದನು. ಅಲ್ಲಿ ಮಕ್ಕಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿತ ದೌರ್ಜನ್ಯ ಎಸಗುತ್ತಿದ್ದನು. ಶಿಕ್ಷಕನ ಹೆದರಿಕೆಯಿಂದ ವಿದ್ಯಾರ್ಥಿಗಳು ಬಹಿರಂಗಪಡಿಸುತ್ತಿರಲಿಲ್ಲ. ಆರೋಪಿ ಶಿಕ್ಷಕ 10 ರಿಂದ 12 ವರ್ಷದ ಮಕ್ಕಳ ಮೇಲೆ ಕಣ್ಣು ಹಾಕುತ್ತಿದ್ದನು. ಈ ಪ್ರದೇಶದಲ್ಲಿ ಬಾಲಕೀಯರ ಪ್ರೌಢ ಶಾಲೆ ಕೂಡ ನಡೆಸಲಾಗುತ್ತಿರುವುದು.

Share this Story:

Follow Webdunia kannada