Webdunia - Bharat's app for daily news and videos

Install App

ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್ಪಾಲ್‌ಗೆ ಮಾತೃವಿಯೋಗ

Webdunia
ಸೋಮವಾರ, 19 ಮೇ 2014 (20:26 IST)
ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ತೆಹ್ಲಕಾ ಸಂಸ್ಥಾಪಕ ತರುಣ್ ತೇಜಪಾಲ್ ತಾಯಿ ಇಂದು ಇಹಲೋಕ ತ್ಯಜಿಸಿದ್ದರಿಂದ ಅಂತ್ಯಸಂಸ್ಕಾರ ನೆರವೇರಿಸಲು ಸುಪ್ರೀಂಕೋರ್ಟ್ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.  
 
ತೇಜಪಾಲ್ ತಾಯಿ ಶಕುಂತಲಾ ರವಿವಾರದಂದು ಗೋವಾದಲ್ಲಿ ನಿಧನ ಹೊಂದಿದ್ದರಿಂದ ತೇಜಪಾಲ್‌ಗೆ ಕೋರ್ಟ್ ಮೂರು ವಾರಗಳ ಜಾಮೀನು ನೀಡಿದೆ ಎಂದು ತೇಜಪಾಲ್ ಪರ ವಕೀಲ ಸಂದೀಪ್ ಕಪೂರ್ ಹೇಳಿದ್ದಾರೆ. 
 
ತಾಯಿಯ ಅಂತ್ಯಕ್ರಿಯಯಲ್ಲಿ ಪಾಲ್ಗೊಳ್ಳಲು ಜಾಮೀನು ನೀಡುವಂತೆ ನ್ಯಾಯಾಲಯದ ಮುಂದೆ ಕೋರಿಕೆ ಸಲ್ಲಿಸಲಾಯಿತು ಎಂದು ವಕೀಲ ಕಪೂರ್ ತಿಳಿಸಿದ್ದಾರೆ.
 
ಕಳೆದ 2013ರಲ್ಲಿ ಗೋವಾದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ತಮ್ಮ ಸಹದ್ಯೋಗಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 6 ತಿಂಗಳುಗಳಿಂದ ತೇಜಪಾಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. 
 
 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ