Webdunia - Bharat's app for daily news and videos

Install App

ಹಿರಿಯರನ್ನು ಗೌರವಿಸುತ್ತೇನೆ ಎನ್ನುವ ಮೋದಿ ಆಡ್ವಾಣಿ, ಜೋಷಿ ಸಿನ್ಹಾಗೆ ಎಷ್ಟು ಗೌರವ ನೀಡಿದ್ದಾರೆ: ತರುಣ್ ಗೋಗೈ

Webdunia
ಬುಧವಾರ, 30 ಮಾರ್ಚ್ 2016 (12:26 IST)
ನಾನು ಹಿರಿಯ ವ್ಯಕ್ತಿಯಾಗಿದ್ದರಿಂದ ನನ್ನನ್ನು ಗೌರವಿಸುತ್ತೇನೆ ಎಂದು ಮೋದಿ ಹೇಳುತ್ತಾರೆ. ಆದರೆ, ಅವರು ತಮ್ಮದೇ ಪಕ್ಷದ ಹಿರಿಯ ನಾಯಕರನ್ನು ಗೌರವಿಸುವುದಿಲ್ಲ. ಬಿಜೆಪಿಯಲ್ಲಿರುವ ಹಿರಿಯ ನಾಯಕರಾದ ಆಡ್ವಾಣಿ ಮತ್ತು ಮುರುಳಿ ಮನೋಹರ್ ಜೋಷಿ ಅಥವಾ ಯಶ್ವಂತ್ ಸಿನ್ಹಾ ಅವರನ್ನು ಪ್ರಧಾನಿ ಮೋದಿ ಯಾವ ರೀತಿ ಗೌರವಿಸಿದ್ದಾರೆ ಎನ್ನುವುದು ದೇಶಕ್ಕೆ ಗೊತ್ತಿದೆ ಎಂದು ಮುಖ್ಯಮಂತ್ರಿ ತರುಣ್ ಗೋಗೈ ತಿರುಗೇಟು ನೀಡಿದರು. 
 
ಆಸ್ಸಾಂ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದ ಕಾವು ಏರುತ್ತಿದೆ. ಪ್ರಧಾನಿ ಮೋದಿ ನನಗೆ ವಯಸ್ಸಾಗಿದ್ದರಿಂದ ಸಾಯಲು ಬಯಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
 
ಪ್ರಧಾನಿ ಮೋದಿ ಆಸ್ಸಾಂ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು, ಸಿಎಂ ಗೋಗೈ 90 ವರ್ಷದವರಾಗಿದ್ದರಿಂದ ಅವರಿಂದ ಅಭಿವೃದ್ಧಿ ಕಾರ್ಯಗಳು ಸಾಧ್ಯವಿಲ್ಲ. ಬಿಜೆಪಿಗೆ ಮತ ನೀಡಿದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯ ಎಂದು ನೀಡಿರುವ ಹೇಳಿಕೆಗೆ ಗೋಗೈ ಗರಂ ಆಗಿದ್ದಾರೆ.
   
ನಾನು 90 ವರ್ಷದವನಾಗಿದ್ದರಿಂದ ಹೋಗುವಂತೆ ಹೇಳುತ್ತಿದ್ದಾರೆ. ಹೋಗು ಎಂದರೆ ಎಲ್ಲಿಗೆ ಹೋಗಬೇಕು? ನಾನು ಎಲ್ಲಿಗೆ ಹೋಗಲು ಪ್ರಧಾನಿ ಬಯಸುತ್ತಾರೆ?  ನನಗೆ ಗೌರವ ಕೊಡುತ್ತಿದ್ದಾರೆಯೇ ಅಥವಾ ತಮಾಷೆ ಮಾಡುತ್ತಿದ್ದಾರೆಯೇ ಎಂದು ಕಿಡಿಕಾರಿದರು.
 
ಆಸ್ಸಾಂ ಜನತೆ ಸದಾ ಹಿರಿಯರನ್ನು ಗೌರವಿಸುತ್ತಾರೆ. ಪ್ರಧಾನಿ ಮೋದಿ ಮತ್ತು ಇತರ ಬಿಜೆಪಿ ನಾಯಕರು ರಾಜ್ಯಕ್ಕೆ ಬಂದ ಆಸ್ಸಾಂ ಜನತೆಯನ್ನು ಅಪಮಾನ ಮಾಡಿ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ತರುಣ್ ಗೋಗೈ ಆರೋಪಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments