Webdunia - Bharat's app for daily news and videos

Install App

ಬಸ್‌ಚಾಲಕರು, ನಿರ್ವಾಹಕನಿಂದ 15 ವರ್ಷದ ಬಾಲಕಿಯ ಮೇಲೆ ಗ್ಯಾಂಗ್‌ರೇಪ್

Webdunia
ಬುಧವಾರ, 7 ಜೂನ್ 2017 (15:51 IST)
ದೇಶಾದ್ಯಂತ ಆಕ್ರೋಶ ಮೂಡಿಸಿದ್ದ ನಿರ್ಭಯಾ ಅತ್ಯಾಚಾರ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ತಮಿಳುನಾಡಿನಿಂದ ವರದಿಯಾಗಿದೆ.
 
15 ವರ್ಷ ವಯಸ್ಸಿನ ಬಾಲಕಿಯ ಮೇಲೆ ರಾತ್ರಿ ಸಮಯದಲ್ಲಿ ಇಬ್ಬರು ಚಾಲಕರು, ಓರ್ವ ನಿರ್ವಾಹಕ ಗ್ಯಾಂಗ್‌ರೇಪ್ ಎಸಗಿದ ಘಟನೆ ನಾರಾಯಣಪಾಳ್ಯಂನಲ್ಲಿ ವರದಿಯಾಗಿದೆ. 
 
ರಾತ್ರಿ ಸಮಯದಲ್ಲಿ ಗ್ರಾಮವೊಂದರ ಬಳಿ ಬಸ್ ನಿಲ್ಲಿಸಿದ ಇಬ್ಬರು ಚಾಲಕರು ಮತ್ತು ನಿರ್ವಾಹಕ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಾರೆ. 
 
ಬಸ್‌ನಲ್ಲಿ ಬಾಲಕಿಯೊಬ್ಬಳ ರೋಧನ ಕೇಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪೋಷಕರೊಂದಿಗೆ ಜಗಳವಾಡಿದ್ದ ಬಾಲಕಿ ಕೋಪದ ಭರದಲ್ಲಿ ಗೊತ್ತು ಗುರಿಯಿಲ್ಲದೇ ಎದುರಿಗೆ ಬಂದ ಬಸ್ ಹತ್ತಿದ್ದಳು ನಂತರ ಗ್ರಾಮವೊಂದರಲ್ಲಿ ಇಳಿದಿದ್ದಳು. ಮತ್ತೆ ಅದೇ ಬಸ್‌ನಲ್ಲಿ ರಾತ್ರಿ ಪ್ರಯಾಣಿಸುವಾಗ ಆಕೆಯ ಮೇಲೆ ಅತ್ಯಾಚಾರದ ಘಟನೆ ನಡೆದಿದೆ.  
 
ಆರೋಪಿಗಳಾದ ಸನ್ಯಾಸಿಕುಂಡ್ ಮೂಲದ ಎಸ್.ಮಣಿವಣ್ಣನ್, ಅಥಿಕಾರಿಪಟ್ಟಿ ಮೂಲದ ಮುರುಗನ್ ಮತ್ತು ನಿರ್ವಾಹಕ ಕೆ.ಪೆರುಮಾಳ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 
 
ಮತ್ತೊಂದು ಮೂಲಗಳ ಪ್ರಕಾರ, ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ, ಮೂರು ವರ್ಷಗಳ ಹಿಂದೆ 20 ವರ್ಷ ವಯಸ್ಸಿನ ಜಿ.ವಿಜಯನ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು. ವಿಜಯನ್ ಹಲವಾರು ಬಾರಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದನು. ನಂತರ ಬಾಲಕಿಯನ್ನು ತನ್ನ ಗೆಳೆಯ ಬಸ್ ನಿರ್ವಾಹಕ  ಕೆ.ಪೆರುಮಾಳ್‌ಗೆ ಪರಿಚಯಿಸಿದ್ದನು. ಪೆರುಮಾಳ್ ಮತ್ತು ಬಾಲಕಿ ಬಹುಬೇಗ ಆತ್ಮಿಯರಾಗಿದ್ದರು ಎನ್ನಲಾಗಿದೆ.  
 
ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments