Select Your Language

Notifications

webdunia
webdunia
webdunia
webdunia

ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಜಯಲಲಿತಾ

ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಜಯಲಲಿತಾ
ಚೆನ್ನೈ , ಶನಿವಾರ, 4 ಜುಲೈ 2015 (17:55 IST)
ಆರ್.ಕೆ.ನಗರ್ ವಿಧಾನಸಭಾ ಕ್ಷೇತ್ರದಿಂದ ಭರ್ಜರಿಯಾಗಿ ಗೆದ್ದು ಬಂದಿರುವ ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ  ಶನಿವಾರ ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 
 

ತಮಿಳುನಾಡು ವಿಧಾನಸಭೆಯಲ್ಲಿರುವ ತಮ್ಮ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ವಿಧಾನಸಭಾಧ್ಯಕ್ಷ ಪಿ.ಧನಪಾಲ್ ಉಪಸ್ಥಿತಿಯಲ್ಲಿ   ಜಯಾ ಪ್ರಮಾಣವಚನವನ್ನು ಓದಿದರು. ಮಂತ್ರಿಮಂಡಲದ ಇತರ ಸಚಿವರು ಸಹ ಈ ಸಂದರ್ಭಕ್ಕೆ ಸಾಕ್ಷಿಯಾದರು. 
 
10 ತಿಂಗಳ ಅಂತರದ ಬಳಿಕ ಎಐಡಿಎಂಕೆ ವರಿಷ್ಠೆ ಶಾಸಕಿ ಸ್ಥಾನಕ್ಕೆ ಮರಳಿದ್ದಾರೆ. 
 
ಕರ್ನಾಟಕದ ಕೆಳ ಹಂತದ ನ್ಯಾಯಾಲಯ ಜಯಾರವರನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಿದ್ದರಿಂದ ಅವರು ಶಾಸಕಿ ಸ್ಥಾನ ಮತ್ತು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಅವರನ್ನು ಕರ್ನಾಟಕ ಹೈಕೋರ್ಟ್ ನಿರಪರಾಧಿ ಎಂದು ಖುಲಾಸೆ ಮಾಡಿತ್ತು. ಹೀಗಾಗಿ ಅವರು ಸಿಎಂ ಸ್ಥಾನಕ್ಕೆ ಮರಳಿದ್ದರು. 
 
ಉತ್ತರ ಚೆನ್ನೈನ ರಾಧಾಕೃಷ್ಣನ್‌ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಸಿಪಿಐ ನಾಯಕ ಸಿ ಮಹೇಂದ್ರನ್ ಮತ್ತು ಸಾಮಾಜಿಕ ಕಾರ್ಯಕರ್ತ ಕೆ ಆರ್ ರಾಮಸ್ವಾಮಿ ಸೇರಿದಂತೆ 27 ಅಭ್ಯರ್ಥಿಗಳನ್ನು 1,50,722 ಮತಗಳಿಂದ ಪರಾಭವಗೊಳಿಸಿದ್ದ ಜಯಲಲಿತಾ ನಿರೀಕ್ಷೆಯಂತೆಯೇ ಭರ್ಜರಿ ಜಯವನ್ನು ಗಳಿಸಿದ್ದರು. 
 
ಜೂನ್ 27 ರಂದು ನಡೆದ ಉಪಚುನಾವಣೆ ಫಲಿತಾಂಶ ಜೂನ್ 30 ರಂದು ಘೋಷಣೆಯಾಗಿತ್ತು. 

Share this Story:

Follow Webdunia kannada