Webdunia - Bharat's app for daily news and videos

Install App

ಎಲ್ಲ ಪಕ್ಷದವರಿಂದ ಹಣ ಪಡೆದುಕೊಳ್ಳಿ, ಆದರೆ ಆಪ್‌ಗೆ ಮತ ನೀಡಿ ಎಂದ ಕೇಜ್ರಿವಾಲ್

Webdunia
ಮಂಗಳವಾರ, 19 ಆಗಸ್ಟ್ 2014 (18:37 IST)
ಕಳೆದೆರಡು ದಿನಗಳಿಂದ ಪಂಜಾಬ್ ಪ್ರವಾಸದಲ್ಲಿರುವ ಆಪ್ ಮುಖಂಡ  ತಲವಾಂಡಿ ಸಾಬೋ ಪ್ರಾಂತ್ಯದ ಹಳ್ಳಿಯಲ್ಲಿ  ಜನರನ್ನುದ್ದೇಶಿಸಿ ಮಾತನಾಡುತ್ತ ನಮ್ಮ ವಿರೋಧಿ ಪಕ್ಷದವರಿಂದ ಪ್ರತಿ ಮತಕ್ಕೆ ಕನಿಷ್ಠ 4,000 ಬೇಡಿಕೆ ಇಡಿ. ಆದರೆ ಪ್ರಾಮಾಣಿಕತೆಯಿಂದ ಆಪ್ ಪಕ್ಷಕ್ಕೆ ಮತ ನೀಡಿ ಎಂದು ಕರೆ ನೀಡಿದ್ದಾರೆ. 

ತಮ್ಮ ಪಕ್ಷದ ಇತರ ನಾಯಕರ ಜತೆ ಆಪ್ ಅಭ್ಯರ್ಥಿ ಪ್ರೊಫೆಸರ್ ಬಲ್ಜಿಂದರ್ ಕೌರ್ ಅವರ ಪರ ರೋಡ್ ಶೋ ನಡೆಸಿದ ಅವರು, ತಲವಾಂಡಿ ಸಾಬೋದ ಎಲ್ಲ ಹಳ್ಳಿಗರ ಬಳಿಯೂ ಅವರು ಇದೇ ಮಾತುಗಳನ್ನು ಪುನರುಚ್ಚರಿಸಿದ್ದಾರೆ. 
 
ಕೆಲವು ಪಕ್ಷಗಳು ತಮಗೆ ಮತ ನೀಡಿದರೆ ಬೈಕ್ ಕೊಡುತ್ತೇವೆ ಎಂದು  ಆಮಿಷ ಒಡ್ಡಿದರು ಎಂದು ಭಾಗಿ ವಂಡರ್ ಹಳ್ಳಿಯ ಆಪ್ ಸಮರ್ಥಕರು ದೂರಿದಾಗ, ಅಂತಹ ಉಡುಗೊರೆಗಳನ್ನು ಒಪ್ಪಿಕೊಳ್ಳಿ, ಆದರೆ ನಿಮ್ಮ ಮಕ್ಕಳ  ಭವಿಷ್ಯಕ್ಕಾಗಿ ಮತ ನೀಡಿ ಎಂದು ಅವರು ಹೇಳಿದರು.
 
ದೆಹಲಿ ಮುಖ್ಯಮಂತ್ರಿಯಾಗಿ  ತಾವು ಉತ್ತಮ ಕಾರ್ಯಗಳನ್ನು ಮಾಡಿದ್ದಾಗಿ  ಹೇಳಿದ ಅವರು  ನಮ್ಮ 49 ದಿನಗಳ ಅಧಿಕಾರವಧಿಯಲ್ಲಿ ಪೋಲಿಸರು ಲಂಚ ಪಡೆಯುವುದನ್ನು ನಿಲ್ಲಿಸಿದ್ದರು. ಸರಕಾರಿ ಕಚೇರಿಗಳಲ್ಲಿ ಭೃಷ್ಟಾಚಾರ ಸಂಪೂರ್ಣವಾಗಿ ನಿಂತಿತ್ತು. 2017ರಲ್ಲಿ ನಾವು ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ನೀಡಿದ ಉತ್ತಮ ಆಡಳಿತವನ್ನು ಇಲ್ಲಿಯೂ ಪುನರಾವರ್ತಿಸಲಿದ್ದೇವೆ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments