Select Your Language

Notifications

webdunia
webdunia
webdunia
webdunia

ತಾಜ್‌ಮಹಲ್‌ನ್ನು ನಮಾಜ್ ಮಾಡಲು ಮುಸ್ಲಿಮರಿಗಾಗಿ ಮೀಸಲಿಡಿ: ಮೌಲಾನಾ ಖಾಲೀದ್

ತಾಜ್‌ಮಹಲ್‌ನ್ನು ನಮಾಜ್ ಮಾಡಲು ಮುಸ್ಲಿಮರಿಗಾಗಿ ಮೀಸಲಿಡಿ: ಮೌಲಾನಾ ಖಾಲೀದ್
ಲಕ್ನೋ , ಗುರುವಾರ, 20 ನವೆಂಬರ್ 2014 (13:35 IST)
ಲಕ್ನೋದ ಈದ್ಗಾ ಇಮಾಮ್, ಮೌಲಾನಾ ಖಾಲಿದ್ ರಷೀದ್ ಫಿರಂಗಿಮಹಲ್ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ ಅವರಿಗೆ ಮನವಿ ಪತ್ರ ಸಲ್ಲಿಸಿ, ತಾಜ್‌ಮಹಲ್‌ನಲ್ಲಿ ಪ್ರತಿನಿತ್ಯ ಐದು ಬಾರಿ ನಮಾಜ್ ಮಾಡಲು ಅವಕಾಶ ನೀಡಿ, ಸಂಪೂರ್ಣವಾಗಿ ಮುಸ್ಲಿಮರಿಗಾಗಿ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ. 
 
ಲಕ್ನೋ: ವಿಶ್ವ ವಿಖ್ಯಾತ ತಾಜಮಹಲ್‌‌ನ್ನು ಉತ್ತರಪ್ರದೇಶಧ ವಕ್ಫ್‌ ಆಸ್ತಿಯನ್ನಾಗಿ ಘೋಷಿಸಬೇಕು ಎಂದು ನಗರಾಬಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಆಜಂ ಖಾನ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. 
 
ತಾಜ್‌ಮಹಲ್‌ನ್ನು ವಕ್ಫ್ ಆಸ್ತಿಯನ್ನಾಗಿ ಘೋಷಿಸಿ ಅದರ ಉಸ್ತುವಾರಿಯನ್ನು ನನಗೆ ವಹಿಸಬೇಕು ಎಂದು ವಕ್ಫ್ ಖಾತೆಯನ್ನು ಕೂಡಾ ಹೊಂದಿರುವ ಸಚಿವ ಖಾನ್ ವಕ್ಫ್ ಬೋರ್ಡ್‌ನ ಸದಸ್ಯರ ಸಭೆಯಲ್ಲಿ ಬಹಿರಂಗ ಹೇಳಿಕೆ ನೀಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಮಧ್ಯೆ ಸಮರವನ್ನು ಸೃಷ್ಟಿಸುವ ಹಂತದಲ್ಲಿದ್ದಾರೆ.   
 
ಏತನ್ಮಧ್ಯೆ, ಲಕ್ನೋದ ಈದ್ಗಾ ಇಮಾಮ್, ಮೌಲಾನಾ ಖಾಲಿದ್ ರಷೀದ್ ಫಿರಂಗಿಮಹಲ್ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ ಅವರಿಗೆ ಮನವಿ ಪತ್ರ ಸಲ್ಲಿಸಿ, ತಾಜ್‌ಮಹಲ್‌ನಲ್ಲಿ ಪ್ರತಿನಿತ್ಯ ಐದು ಬಾರಿ ನಮಾಜ್ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 
 
17ನೇ ಶತಮಾನದ ಸ್ಮಾರಕವಾದ ತಾಜ್‌ಮಹಲ್ ವೀಕ್ಷಣೆಗಾಗಿ ಇ-ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಒತ್ತಾಯಿಸಿ ಪತ್ರ ಬರೆದಿದ್ದಾರೆ.
 
ದೇಶಿಯ ಮತ್ತು ವಿದೇಶಿ ಪ್ರಯಾಣಿಕರು ಟಿಕೆಟ್ ಪಡೆಯಲು ಸರದಿಯಲ್ಲಿ ಗಂಟಗಟ್ಟಲೆ ಕಾಯಬೇಕಾಗುತ್ತದೆ. ಪ್ರಸಕ್ತ ವರ್ಷದಿಂದಲೇ ಇ-ಟಿಕೆಟ್ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರು ಘೋಷಿಸಿದ್ದರೂ ಇಲ್ಲಿಯವರೆಗೆ ಜಾರಿಗೊಂಡಿಲ್ಲ ಎಂದು ಸಿಎಂ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada