Webdunia - Bharat's app for daily news and videos

Install App

ಸ್ವಾತಿ ಕೊಲೆ ಪ್ರಕರಣ: ಆರೋಪಿ ರಾಮ್ ಕುಮಾರ್ ಆತ್ಮಹತ್ಯೆ

Webdunia
ಸೋಮವಾರ, 19 ಸೆಪ್ಟಂಬರ್ 2016 (09:25 IST)
ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ಸ್ವಾತಿ ಕೊಲೆ ಪ್ರಕರಣದ ಆರೋಪಿ ರಾಮ್ ಕುಮಾರ್  ಭಾನುವಾರ ಜೈಲಿನಲ್ಲಿಯೇ ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ಆತನನ್ನು ಚೆನ್ನೈನ ಹೊರವಲಯದಲ್ಲಿರುವ ಪುಳಲ್ ಜೈಲಿನಲ್ಲಿರಿಸಲಾಗಿತ್ತು. 
ಆದರೆ ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದು ರಾಮ್ ಕುಮಾರ್ ಪರ ವಕೀಲರು ಆರೋಪಿಸಿದ್ದಾರೆ. 
 
ಜೈಲ್‌ನ ಗೋಡೆ ಏರಿ ವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿ ಬಳಿಕ ಅದನ್ನು ಕುತ್ತಿಗೆಗೆ ಬಲವಾಗಿ ಬಿಗಿದುಕೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
 
ತನ್ನ ಪ್ರೀತಿಯನ್ನು ನಿರಾಕರಿಸಿದ್ದಲ್ಲದೇ, ಸಾರ್ವಜನಿಕವಾಗಿ ನನ್ನನ್ನು ಅಪಮಾನ ಮಾಡಿದ್ದಾಳೆ ಎಂಬ ಕೋಪದಲ್ಲಿ ರಾಮ್ ಕುಮಾರ್ ಟೆಕ್ಕಿ ಸ್ವಾತಿಯನ್ನು ಚೆನ್ನೈನ ನುಂಗಮ್ ಬಾಕಮ್ ರೈಲು ನಿಲ್ದಾಣದಲ್ಲಿ ಭೀಕರವಾಗಿ ಕೊಚ್ಚಿ ಕೊಲೆಗೈದಿದ್ದ. ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಕೊನೆಗೆ ಜುಲೈ 2 ರಂದು ತನ್ನ ಸ್ವಗ್ರಾಮ ತಿರುನಲ್ವೇಲಿಯಲ್ಲಿ ರಾಮ್ ಕುಮಾರ್‌ನನ್ನು ಬಂಧಿಸಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಢೀರ್‌ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ

ಮುಂಬೈ: ಎಂಎನ್‌ಎಸ್ ಮುಖಂಡನ ಪುತ್ರನ ದೌಲತ್ತಿಗೆ ಸರಿಯಾಗಿ ಮಾಡಿದ ಖಾಕಿ

ಟ್ರಾಫಿಕ್‌ ಜಾಮ್‌ಗೆ ಸುಸ್ತು: ಖಾಸಗಿ ಮೇಲ್ಸೇತುವೆ ನಿರ್ಮಿಸಲು ಮುಂದಾದ ಪ್ರೆಸ್ಟೀಜ್ ಗ್ರೂಪ್‌

ದ.ಕನ್ನಡದಲ್ಲಿ ಹೆಚ್ಚುತ್ತಿರುವ ಮಲೇರಿಯಾ ಪ್ರಕರಣ: ವಲಸೆ ಕಾರ್ಮಿಕರ ಮೇಲೆ ಹೆಚ್ಚಿನ ನಿಗಾ

ಪಹಲ್ಗಾಮ್‌ ದಾಳಿ, ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರಿಗೆ ಬಿಗ್‌ ಶಾಕ್‌

ಮುಂದಿನ ಸುದ್ದಿ
Show comments