Select Your Language

Notifications

webdunia
webdunia
webdunia
webdunia

ಒಬ್ಬ ಸನ್ಯಾಸಿ, ನರೇಂದ್ರ ಮೋದಿ ಜೀವನವನ್ನೇ ಬದಲಿಸಿದ!

ಒಬ್ಬ ಸನ್ಯಾಸಿ, ನರೇಂದ್ರ ಮೋದಿ ಜೀವನವನ್ನೇ ಬದಲಿಸಿದ!
, ಶುಕ್ರವಾರ, 1 ಜುಲೈ 2016 (12:22 IST)
ನರೇಂದ್ರ ಮೋದಿ - ಒಂದು ವೇಳೆ  ರಾಜಕೀಯ ಪ್ರವೇಶಿಸಿ ಪ್ರಧಾನಿಯಾಗದಿದ್ದರೆ ಅವರೇನಾಗಿರುತ್ತಿದ್ದರು ಗೊತ್ತೇ? ನಿಸ್ಸಂದೇಹವಾಗಿಯೂ ಸನ್ಯಾಸಿ. ಲೌಕಿಕ ಜೀವನದಲ್ಲಿ ವೈರಾಗ್ಯ ಬಂದು ಸನ್ಸಾಸಿಯಾಗ ಹೊರಟಿದ್ದ ಅವರನ್ನು ತಡೆದಿದ್ದು ಕೂಡ ಸನ್ಯಾಸಿಯೇ. ನಿಮ್ಮ ಹಣೆಬರಹದಲ್ಲಿ ಅದು ಬರೆದಿಲ್ಲ ಎಂದು ಕೈ ಅಡ್ಡ ಹಿಡಿದಿದ್ದು ಸ್ವಾಮಿ ಆತ್ಮಸ್ಥಾನಂದ.

ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವಿ ವರ್ಚಸ್ಸು ಹೊಂದಿರುವ ಪ್ರಧಾನಿ ಮೋದಿ ತಮ್ಮ ಯುವ ವಯಸ್ಸಿನಲ್ಲಿ ತಾವು ಸನ್ಯಾಸತ್ವವನ್ನು ಸ್ವೀಕರಿಸುವುದಾಗಿ ಹಠ ಹಿಡಿದಿದ್ದರಂತೆ. ಹೌದು ಅದು 1966ರ ಸಮಯ. ಆಗ ಕೇವಲ 16 ವರ್ಷದವರಾಗಿದ್ದ ಮೋದಿ ರಾಜ್ಕೋಟ್‌ನಲ್ಲಿದ್ದರು. ಜೀವನೋದ್ದೇಶದ ಹುಡುಕಾಟದಲ್ಲಿ ಅಲ್ಲಿ-ಇಲ್ಲಿ ಓಡಾಡುತ್ತಿದ್ದರು. ಆ ಸಂದರ್ಭದಲ್ಲಿ ರಾಜ್ಕೋಟ್‌ನಲ್ಲಿ ರಾಮಕೃಷ್ಣ ಮಠದ ಕೇಂದ್ರ ಪ್ರಾರಂಭವಾಗಿತ್ತು. ಸ್ವಾಮಿ ಆತ್ಮಸ್ಥಾನಂದ ಅದರ ಮುಖ್ಯಸ್ಥರಾಗಿದ್ದರು. ಸ್ವಾಮಿ ವಿವೇಕಾನಂದ ಅವರ ಪ್ರಭಾವಕ್ಕೊಳಗಾಗಿದ್ದ ನರೇಂದ್ರ ಮೋದಿ ಒಂದು ದಿನ ಆ ಆಶ್ರಮಕ್ಕೆ ಹೋದರು. ಅಲ್ಲಿ ಸ್ವಾಮಿಗಳ ಜತೆ ಕೆಲ ದಿನಗಳನ್ನು ಕಳೆದ ಬಳಿಕ ಮೋದಿ ಅವರು ಅವರನ್ನೇ ತಮ್ಮ ಗುರುವಾಗಿ ಸ್ವೀಕರಿಸಿದರು. ಬಳಿಕ ನಾನು ಕೂಡ ಸಾಂಸಾರಿಕ ಜೀವನದಿಂದ ಮುಕ್ತಿಯನ್ನು ಬಯಸುತ್ತೇನೆ. ನನಗೂ ಸನ್ಯಾಸಿ ದೀಕ್ಷೆ ನೀಡಿ ಎಂದು ಹಠ ಹಿಡಿದು ಕುಳಿತರು. 
 
ಆದರೆ ನಿಮ್ಮ ಭವಿಷ್ಯದಲ್ಲಿ ಸನ್ಯಾಸ ಬರೆದಿಲ್ಲ ಎಂದ ಆತ್ಮಸ್ಥಾನಂದರು ಸನ್ಯಾಸಿ ದೀಕ್ಷೆ ನೀಡಲು ನಿರಾಕರಿಸಿದರು. ಆದರೆ ಮೋದಿ ಅವರು ಹಠ ಬಿಡದಿದ್ದಾಗ ಸ್ವಾಮಿಗಳು ಒಂದು ಪತ್ರವನ್ನು ಅವರ ಕೈಗಿತ್ತು ರಾಮಕೃಷ್ಣ ಮಠದ ಮುಖ್ಯ ಕಾರ್ಯಾಲಯ ಬೇಲೂರು ಮಠಕ್ಕೆ ಕಳುಹಿಸಿದರು. ಪತ್ರ ತೆಗೆದುಕೊಂಡು ಹೋಗಿ ಅಂದು ಅಲ್ಲಿನ ಮುಖ್ಯಸ್ಥರಾಗಿದ್ದ ಮಾಧವಾನಂದ ಬಳಿ ಕೊಟ್ಟ ಮೋದಿಗೆ ಅವರು ಸಹ ಸನ್ಯಾಸ ದೀಕ್ಷೆ ಕೊಡಲು ನಿರಾಕರಿಸಿದರು. ನಿಮ್ಮ ಹಣೆಯಲ್ಲಿ ಸಾರ್ವಜನಿಕ ಜೀವನ ಬರೆದಿದೆ ಎಂದು ವಾಪಸ್ ಕಳುಹಿಸಿದರು. 
 
ಹೀಗಾಗಿ ಮತ್ತೆ ಮರಳಿ ತಮ್ಮ ಗುರುಗಳ ಬಳಿ ನಡೆದ ಮೋದಿ ಕೆಲ ದಿನಗಳ ಕಾಲ ಆಶ್ರಮದಲ್ಲೇ ಕಳೆದು ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿ, ನಿಧಾನವಾಗಿ ರಾಜನೀತಿಗಿಳಿದರು. ಬಳಿಕ ನಡೆದಿದ್ದೆಲ್ಲ ಇತಿಹಾಸ. 
 
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವಾಗ ಸಹ ಮೋದಿ ಅವರ ಜೇಬಿನಲ್ಲಿ ತಮ್ಮ ಗುರುಗಳು ಪ್ರಸಾದ ರೂಪದಲ್ಲಿ ಕೊಟ್ಟ ಹೂವಿತ್ತು. ಅದನ್ನು ಅವರ ಗುರುಗಳು ಪತ್ರದ ಜತೆ  ಕಳುಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಲೈವ್ ಸುಸೈಡ್: ಕೆಲಸ ಸಿಗಲಿಲ್ಲವೆಂದು ಮೂರನೇ ಮಹಡಿಯಿಂದ ಜಿಗಿದ