Select Your Language

Notifications

webdunia
webdunia
webdunia
webdunia

ಸ್ವಚ್ಛ ಭಾರತ ತೆರಿಗೆ ಮೋದಿ ಜಾಹೀರಾತಿಗೆ: ದಿಗ್ವಿಜಯ್ ಸಿಂಗ್

ಸ್ವಚ್ಛ ಭಾರತ ತೆರಿಗೆ ಮೋದಿ ಜಾಹೀರಾತಿಗೆ: ದಿಗ್ವಿಜಯ್ ಸಿಂಗ್
ಹೈದರಾಬಾದ್ , ಶನಿವಾರ, 9 ಜುಲೈ 2016 (18:26 IST)
ಸ್ವಚ್ಛ ಭಾರತ ಅಭಿಯಾನವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈ ಯೋಜನೆಗಾಗಿ ಸಂಗ್ರಹಿಸುತ್ತಿರುವ ತೆರಿಗೆ ಕೇವಲ ಪ್ರಧಾನಿ ಮೋದಿ ಅವರ ಜಾಹೀರಾತುಗಳನ್ನು ಪ್ರಕಟಿಸಲು ವಿನಿಯೋಗವಾಗುತ್ತಿದೆ ಎಂದಿದ್ದಾರೆ. 

ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಿಗೆಆಯೋಜಿಸಲಾಗಿದ್ದ ತರಬೇತಿ ಶಿಬಿರದಲ್ಲಿ ಮಾತನ್ನಾಡುತ್ತಿದ್ದ ಅವರು, ಪುರಸಭೆಯ ಪ್ರಥಮ ಆದ್ಯತೆಯ ಕೆಲಸವೇನು? ಸ್ವಚ್ಛತಾ ಕಾರ್ಯ. ಸ್ವಚ್ಛತೆ ಬಹುಮುಖ್ಯವಾದದ್ದು. ನರೇಂದ್ರ ಮೋದಿ ಸ್ವಚ್ಛ ಭಾರತದ ಬಗ್ಗೆ ಮಾತನ್ನಾಡುತ್ತಾರೆ. ಸ್ವಚ್ಛ ಭಾರತ ತೆರಿಗೆಯನ್ನು ಸಹ ಸಂಗ್ರಹಿಸಲಾಗುತ್ತಿದೆ. ಆ ತೆರಿಗೆ ಎಲ್ಲಿಗೆ ಹೋಗುತ್ತಿದೆ? ಸಂಪೂರ್ಣ ಹಣ ಮೋದಿ ಅವರ ಜಾಹೀರಾತುಗಳನ್ನು ಪ್ರಕಟಿಸಲು ಹೋಗುತ್ತಿದೆ. ಸ್ವಚ್ಛ ಭಾರತ ಅಭಿಯಾನಕ್ಕೆ ಹೋಗುತ್ತಿಲ್ಲ ಎಂದು ಆರೋಪಿಸಿದ್ದಾರೆ. 
 
ಸ್ಮಾರ್ಟ್ ಸಿಟಿ ಪರಿಕಲ್ಪನೆ ಬಗ್ಗೆ ಸಹ ಸ್ಪಷ್ಟತೆ ಇಲ್ಲ. ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿ ಪಡಿಸಬಹುದು. ಆದರೆ ಮೊದಲು, ನಗರ ಮತ್ತು ಪಟ್ಟಣಗಳು ಕಸ ಮುಕ್ತ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಅವರು ಎನ್‌ಡಿಎ ಸರ್ಕಾರದ ಮತ್ತೊಂದು ಪ್ರಮುಖ ಯೋಜನೆ ಬಗ್ಗೆ ಕೂಡ ಪ್ರಶ್ನೆಯನ್ನೆತ್ತಿದ್ದಾರೆ.
 
ಬಿಜೆಪಿ ಮತ್ತು ಆರ್‌ಎಸ್ಎಸ್ ವಿರುದ್ಧ ಕಿಡಿಕಾರಿದ ಅವರು ಕೇಸರಿ ಸಂಘಟನೆ ಮತ್ತು ಮೋದಿ ಅವರು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿದರು ಎಂದು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬರುವ ವರ್ಷದಲ್ಲಿ 8% ಬೆಳವಣಿಗೆ ಗುರಿ ಹೊಂದಿದ್ದೇವೆ: ಪ್ರಧಾನಿ