Select Your Language

Notifications

webdunia
webdunia
webdunia
webdunia

ನಾಳೆ 25 ಕಾಂಗ್ರೆಸ್ ಸಂಸದರ ಅಮಾನತ್ತು ತೆರುವು ಸಾಧ್ಯತೆ: ಸರಕಾರಿ ಮೂಲಗಳು

ನಾಳೆ 25 ಕಾಂಗ್ರೆಸ್ ಸಂಸದರ ಅಮಾನತ್ತು ತೆರುವು ಸಾಧ್ಯತೆ: ಸರಕಾರಿ ಮೂಲಗಳು
ನವದೆಹಲಿ , ಮಂಗಳವಾರ, 4 ಆಗಸ್ಟ್ 2015 (18:36 IST)
ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ 25 ಕಾಂಗ್ರೆಸ್ ಸದಸ್ಯರ ಅಮಾನತ್ತನ್ನು ನಾಳೆ ತೆರುವುಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಬಿಜು ಜನತಾ ದಳ, ಸಮಾಜವಾದಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಮಹಾಜನ್ ಅವರನ್ನು ಭೇಟಿ ಮಾಡಿ ಅಮಾನತ್ತು ನಿರ್ಧಾರವನ್ನು ಹಿಂಪಡೆಯುವಂತೆ ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸಂಸತ್ತಿನ ಕಲಾಪಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿ 25 ಕಾಂಗ್ರೆಸ್ ಪಕ್ಷದ ಸಂಸದರನ್ನು ಐದು ದಿನಗಳ ಅವಧಿಗೆ ಅಮಾನತ್ತುಗೊಳಿಸಲಾಗಿತ್ತು. ಕಾಂಗ್ರೆಸ್ ಸಂಸದರನ್ನು ಅಮಾನತ್ತುಗೊಳಿಸಿರುವುದನ್ನು ವಿರೋಧಿಸಿ ಇತರರು ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ಆರಂಭಿಸಿದ್ದರು.
 
ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮೋದಿ ಸರಕಾರದ ನಿರ್ಧಾರ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಾಗ್ದಾಳಿ ನಡೆಸಿದ್ದರು.
 
ಸೋನಿಯಾ ಪುತ್ರ ರಾಹುಲ್ ಗಾಂಧಿ ಪ್ರತಿಭಟನೆ ನಿರಂತರವಾಗಿ ನಡೆಯಲಿದೆ ಎಂದು ಘೋಷಿಸಿದ್ದರಿಂದ ಸಭಾಪತಿ ಮಹಾಜನ್ ಮೊದಲ ಬಾರಿಗೆ 25 ಕಾಂಗ್ರೆಸ್ ಸಂಸದರನ್ನು ಅಮಾನತ್ತುಗೊಳಿಸಿದ್ದರು. 
 

Share this Story:

Follow Webdunia kannada