Webdunia - Bharat's app for daily news and videos

Install App

ಸೂರ್ಯ ನಮಸ್ಕಾರ ಔಟ್, ಓಂ ಕಡ್ಡಾಯವಲ್ಲ: ಸರಕಾರ

Webdunia
ಶುಕ್ರವಾರ, 19 ಜೂನ್ 2015 (13:20 IST)
ಭಾನುವಾರ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಂಪೂರ್ಣ ಭಾರತ ಸಿದ್ಧವಾಗುತ್ತಿದೆ. ಯೋಗ ದಿನದ ಅಧಿಕೃತ ಕಾರ್ಯಕ್ರಮದಿಂದ  ಸೂರ್ಯ ನಮಸ್ಕಾರವನ್ನು ಕೈ ಬಿಡಲಾಗಿದೆ ಮತ್ತು ‘ಓಂ’ ಮಂತ್ರ ಪಠಣ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

‘ಸೂರ್ಯ ನಮಸ್ಕಾರ, ಸರ್ಕಾರದ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಯೋಗ ಕಾರ್ಯಕ್ರಮದ ಭಾಗ ಅಲ್ಲ. ಅಲ್ಲದೆ ‘ಓಂ’ ಮಂತ್ರೋಚ್ಚಾರಣೆ ಕಡ್ಡಾಯವಲ್ಲ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಾವು ಇಷ್ಟಪಟ್ಟ ದೇವರ ಹೆಸರನ್ನು ಪಠಿಸಬಹುದು’ ಎಂದು ಆಯುಷ್‌  ಖಾತೆ ರಾಜ್ಯ ಸಚಿವ ಶ್ರೀಪಾದ್‌ ನಾಯ್ಕ್‌ ಗುರುವಾರ ಹೇಳಿದ್ದಾರೆ.
 
ಪ್ರಧಾನಿ ಮೋದಿ, ಕೇಂದ್ರ ಸಚಿವರು, ಸಾರ್ವಜನಿಕ ವ್ಯಕ್ತಿಗಳು, ರಾಜತಾಂತ್ರಿಕ ಅಧಿಕಾರಿಗಳು, ವಿದ್ಯಾರ್ಥಿಗಳು, ಅಧಿಕಾರಿಗಳು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಭದ್ರತಾಪಡೆ ಮುಖ್ಯಸ್ಥರು ನವದೆಹಲಿಯಲ್ಲಿ ನಡೆಯಲಿರುವ ಸಾಮೂಹಿಕ ಯೋಗ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗಸಂಸ್ಥೆಯ ತರಬೇತುದಾರರು ಕಳೆದ 15 ದಿನಗಳಿಂದ ಇವರಿಗೆಲ್ಲ ಯೋಗ ಹೇಳಿಕೊಡುತ್ತಿದ್ದಾರೆ.
 
ಸೂರ್ಯನಮಸ್ಕಾರ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದರಿಂದ ಹಲವು ಮುಸ್ಲಿಂ ಗುಂಪುಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ‘ಓಂ’ ಮತ್ತು ಸಂಸ್ಕ್ರತ ಮಂತ್ರ ಪಠಣಕ್ಕೆ ಸಹ ಈ ಗುಂಪುಗಳು ವಿರೋಧ ವ್ಯಕ್ತ ಪಡಿಸಿವೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments