ಪಾಕ್ ಪ್ರತೀಕಾರಕ್ಕೆ ಬಲಿಪಶುವಾಗಿ ಬೇಹುಗಾರಿಕೆ ಆರೋಪ ಹೊತ್ತಿರುವ ಭಾರತೀಯ ಸೇನೆ ರಾಯಭಾರಿ ಸುರ್ಜಿತ್ ಸಿಂಗ್ ಶನಿವಾರ ಪಾಕಿಸ್ತಾನವನ್ನು ತೊರೆದು ತವರಿಗೆ ಮರಳಿದ್ದಾರೆ.
ದೇಶದ ಭದ್ರತೆಗೆ ಸಂಬಂಧಪಟ್ಟ ದಾಖಲೆ ಆರೋಪ ಹೊಂದಿದ ಆರೋಪದ ಮೇಲೆ ಪಾಕ್ ಹೈ ಕಮಿಷನ್‌ನ ಮೆಹಮೂದ್ ಅಕ್ತರ್ (35) ಎಂಬುವವರನ್ನು ಗುರುವಾರ ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ನೀವು ಇಲ್ಲಿ ಕೆಲಸ ಮಾಡುವುದು ಭಾರತಕ್ಕೆ ಸಮ್ಮತಿ ಇಲ್ಲ. 48 ಗಂಟೆಯೊಳಗೆ ದೇಶ ಬಿಡಿ ಎಂದು ಅವರಿಗೆ ಸೂಚನೆ ನೀಡಲಾಗಿತ್ತು.
ತಮ್ಮ ಅಧಿಕಾರಿಯ ಮೇಲೆ ಆರೋಪ ಕೇಳಿ ಬರುತ್ತಿದ್ದಂತೆ ಪಾಕಿಸ್ತಾನ ಭಾರತದ ರಾಯಭಾರಿ ಅಧಿಕಾರಿ ಸುರ್ಜಿತ್ ಸಿಂಗ್ ಮೇಲೆ ಬೇಹುಗಾರಿಕೆ ಆರೋಪವನ್ನು ಹೊರಿಸಿತ್ತು. ಪಾಕ್ ರಕ್ಷಣಾ ಇಲಾಖೆಯ ಗೌಪ್ಯ ಮಾಹಿತಿಗಳನ್ನು ಭಾರತಕ್ಕೆ ರವಾನಿಸಿದ್ದಾರೆ ಎಂದು ದೂರಿದ್ದ ಪಾಕಿಸ್ತಾನ ಭಾರತ 1961ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ, ಕೂಡಲೇ ಭಾರತೀಯ ರಾಯಭಾರಿಗಳು ಕೂಡಲೇ ದೇಶ ಬಿಡಬೇಕು ಎಂದಿತ್ತು.
ಉರಿ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ಗಡಿ ಭಾಗದಲ್ಲಿ ಗುಂಡಿನ ಚಕಮಕಿ ಹೆಚ್ಚಾಗುತ್ತಿದ್ದು, ಜತೆಗೆ ಇಂತಹ ಬೆಳವಣಿಗೆಗಳು ಕಂಡುಬರುತ್ತಿವೆ. ಉಭಯ ದೇಶಗಳ ಸಂಬಂಧ ದಿನೇ ದಿನೇ ಬಿಗಡಾಯಿಸುತ್ತಿದ್ದು ಸುಧಾರಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ