Select Your Language

Notifications

webdunia
webdunia
webdunia
webdunia

ಸುರೇಶ್ ರೈನಾ ಕೈ ಹಿಡಿಯುತ್ತಿರುವ ಪ್ರಿಯಾಂಕಾ ಬಗ್ಗೆ ನೀವು ತಿಳಿಯಬೇಕಾದ 5 ವಿಶೇಷ ಸಂಗತಿಗಳು

ಸುರೇಶ್ ರೈನಾ ಕೈ ಹಿಡಿಯುತ್ತಿರುವ ಪ್ರಿಯಾಂಕಾ ಬಗ್ಗೆ ನೀವು ತಿಳಿಯಬೇಕಾದ 5 ವಿಶೇಷ ಸಂಗತಿಗಳು
ಮೀರತ್ , ಬುಧವಾರ, 18 ಮಾರ್ಚ್ 2015 (16:34 IST)
ಭಾರತ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟರ್, ಉತ್ತರಪ್ರದೇಶದ ಮೂಲದ ಸುರೇಶ್ ರೈನಾ ತನ್ನ ಬಾಲ್ಯದ ಗೆಳತಿ, ಮೀರತ್‌ನ ಯುವತಿ ಪ್ರಿಯಾಂಕಾ ಚೌಧರಿ ಜತೆ ಇನ್ನು ಕೆಲವೇ ದಿನಗಳಲ್ಲಿ ತಮ್ಮ ಜೀವನದ ಹೊಸ ಇನ್ನಿಂಗ್ಸ್‌ನ್ನು ಪ್ರಾರಂಭಿಸಲಿದ್ದಾರೆ. 
 
ವರದಿಗಳ ಪ್ರಕಾರ , ವಿಶ್ವಕಪ್ ಟೂರ್ನಿಯ ನಂತರ ಭಾರತಕ್ಕೆ ಮರಳಿದ ಬಳಿಕ ರೈನಾ ಎಪ್ರೀಲ್ 3 ರಂದು ನವದೆಹಲಿಯ  ಪಂಚತಾರಾ ಹೋಟೆಲ್ ಒಂದರಲ್ಲಿ ಪ್ರಿಯಾಂಕಾ ಜತೆ ಹಸೆಮಣೆ ಏರಲಿದ್ದಾರೆ. 
 
ಇವು ನೀವು ಪ್ರಿಯಾಂಕಾ ಬಗ್ಗೆ ತಿಳಿಯಬೇಕಾದ 5 ಸಂಗತಿಗಳು:-
 
1.  ವೃತ್ತಿಯಲ್ಲಿ ಬ್ಯಾಂಕರ್ ಆಗಿರುವ ಪ್ರಿಯಾಂಕಾ ಸದ್ಯ ನೆದರ್‌ಲ್ಯಾಂಡ್‌ನಲ್ಲಿ ಉದ್ಯೋಗದಲ್ಲಿದ್ದಾರೆ. 
 
2. ಆಕೆಯ ಕುಟುಂಬ ಮೂಲತಃ ಉತ್ತರಪ್ರದೇಶದ ಬಹ್ರತ್‌ಗೆ ಸೇರಿದ್ದು, ಈಗ ಮೀರತ್‌ನಲ್ಲಿ ನೆಲೆಯೂರಿದೆ. 
 
3. ಪ್ರಿಯಾಂಕಾ ಮತ್ತು ಸುರೇಶ ಬಾಲ್ಯ ಸ್ನೇಹಿತರು ಮತ್ತು ಅವರಿಬ್ಬರ ಕುಟುಂಬಗಳ ನಡುವೆ ಸಹ ಬಲವಾದ ಸ್ನೇಹ ಸಂಬಂಧವಿದೆ. 
 
4. ಅವರೀರ್ವರ ತಂದೆಯಂದಿರು ಮುರಾದ್‌ನಗರ ಶಸ್ತ್ರಾಗಾರ ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಗಳಾಗಿದ್ದರು.
 
5. ಇಬ್ಬರ ತಾಯಂದಿರು ಕೂಡ ಆತ್ಮೀಯ ಸ್ನೇಹಿತೆಯರಾಗಿದ್ದಾರೆ. 

Share this Story:

Follow Webdunia kannada