ನವದೆಹಲಿ : ಭಾರತ ಜಾತ್ಯತೀತ ರಾಷ್ಟ್ರ. ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಪಾಲಿಸುವ ಹಕ್ಕಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್,
ಶ್ರೀ ಶ್ರೀ ಠಾಕೂರ್ ಅನುಕುಲ್ ಚಂದ್ರ ಅವರನ್ನು ದೇವರೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು, ಪಿಐಎಲ್ ಸಲ್ಲಿಸಿದ್ದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದೆ.
ಅರ್ಜಿದಾರ ಉಪೇಂದ್ರ ನಾಥ್ ದಾಲೈ ತನ್ನ ಅರ್ಜಿಯನ್ನು ಓದಲು ಮುಂದಾದ. ಈ ವೇಳೆ ನಿಲ್ಲಿಸಿ ಎಂದ ಪೀಠ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೇ? ಇದು ಹೇಗೆ ಸಾಧ್ಯ? ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಪಾಲಿಸುವ ಹಕ್ಕಿದೆ.
ಹೀಗಿರುವಾಗ ನಿರ್ಧಿಷ್ಟ ಧರ್ಮವನ್ನು ಪಾಲಿಸಿ ಅಂತಾ ಜನರಿಗೆ ನಾವು ಹೇಗೆ ಹೇಳಲು ಸಾಧ್ಯ? ನೀವು ಬೇಕಾದರೆ ಠಾಕೂರ್ ಚಂದ್ರರನ್ನು ಪರಮಾತ್ಮ ಎಂದು ಪರಿಗಣಿಸಿ. ಅದನ್ನು ಬೇರೆಯವರ ಮೇಲೆ ಯಾಕೆ ಹೇರುತ್ತೀರಿ ಎಂದು ಹೇಳಿದೆ.