Webdunia - Bharat's app for daily news and videos

Install App

ವಿಜಯ್ ಮಲ್ಯಗೆ ನ್ಯಾಯಾಂಗ ನಿಂದನೆಯ ಉರುಳು

Webdunia
ಮಂಗಳವಾರ, 9 ಮೇ 2017 (11:49 IST)
9 ಸಾವಿರ ಕೋಟಿ ರೂ. ಸಾಲ ಮರುಪಾವತಿಸದೇ ಲಂಡನ್ನಿನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಲ್ಯ ನ್ಯಾಯಾಂಗ ನಿಂದನೆ ಮಾಡಿರುವುದು ಸ್ಪಷ್ಟವಾಗಿದ್ದು, ಜುಲೈ 10ರಂದು ಹಾಜರಾಗುವಂತೆ ಸುಪ್ರೀಂಕೋರ್ಟ್ ಟಿನೋಸ್ ಜಾರಿ ಮಾಡಿದೆ.

ಎರಡು ಆಧಾರದ ಮೇಲೆ ವಿಜಯ್ ಮಲ್ಯ ನ್ಯಾಯಾಂಗ ನಿಂದನೆ ಮಾಡಿರುವುದು ಸಾಬೀತಾಗಿದೆ.. ಜುಲೈ10ಕ್ಕೆ ಹಾಜರಾಗಿ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ಮಂಡಿಸಲಿ ಎಂದು ಜಸ್ಟೀಸ್ ಎ.ಕೆ. ಗೋಯೆಲ್ ಮತ್ತು ಯು.ಯು. ಲಲಿತ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಆದೇಶಿಸಿದೆ.

9000 ಕೋಟಿ ರೂ. ಸಾಲ ಮರುಪಾವತಿಸಬೇಕೆಂದು ಬ್ಯಾಂಕ್`ಗಳ ಒಕ್ಕೂಟ ಮಲ್ಯ ವಿರುದ್ಧ ಕೇಸ್ ದಾಖಲಿಸಿದ್ದವು. ಕೋರ್ಟ್ ಆದೇಶದ ಬಳಿಕವೂ ಮಲ್ಯ ಹಣ ಪಾವತಿಸಿರಲಿಲ್ಲ.

ಈ ಮಧ್ಯೆ, ಫೆಬ್ರವರಿ 2016ರಂದು ದಿಯಾಜಿಯೋ ಪಿಕ್ ಕಂಪನಿಯಿಂದ 40 ಮಿಲಿಯನ್ ಡಾಲರ್ ಹಣ ಪಡೆದ ಮಲ್ಯ, ಸಾಲ ಮರುಪಾವತಿಸದೇ ತನ್ನ ಮಕ್ಕಳಿಗೆ ವರ್ಗಾವಣೆ ಮಾಡಿದ್ದ. ವಿಜಯ್ ಮಲ್ಯ ಮಾಡಿದ ಈ ಹಣದ ವರ್ಗಾವಣೆ, ಸಾಲ ಮರುಪಾವತಿ ನ್ಯಾಯಮಂಡಳಿ ಮತ್ತು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶಗಳೂ ಸೇರಿ ಹಲವು ಕಾನೂನು ಆದೇಶಗಳ ಉಲ್ಲಂಘನೆಯಾಗಿದೆ ಎಂದು ಬ್ಯಾಂಕ್`ಗಳ ಒಕ್ಕೂಟ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments