Select Your Language

Notifications

webdunia
webdunia
webdunia
webdunia

ರಾಹುಲ್ ಬ್ರಿಟನ್ ನಾಗರಿಕತ್ವ ವಿವಾದ: ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

ರಾಹುಲ್ ಬ್ರಿಟನ್ ನಾಗರಿಕತ್ವ ವಿವಾದ: ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
ನವದೆಹಲಿ , ಮಂಗಳವಾರ, 24 ನವೆಂಬರ್ 2015 (13:21 IST)
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಗರಿಕತ್ವ ವಿವಾದದ ಬಗ್ಗೆ ತನಿಖೆ ನಡೆಸಲು ತುರ್ತಾಗಿ ಸಿಬಿಐಗೆ ಆದೇಶಿಸಬೇಕು ಎನ್ನುವ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
 
ಸೋಮವಾರದಂದು ಸಲ್ಲಿಸಲಾದ ಅರ್ಜಿಯಲ್ಲಿ, ರಾಹುಲ್ ಗಾಂಧಿ ಬ್ರಿಟನ್ ನಾಗರಿಕ ಎಂದು ಅನಧಿಕೃತವಾಗಿ ಸ್ವಯಂ ಘೋಷಿಸಿಕೊಂಡಿರುವ ಬಗ್ಗೆ ಸಿಬಿಐಯಿಂದ ತನಿಖೆ ನಡೆಸಲು ಕೋರ್ಟ್ ನಿರ್ದೇಶನ ನೀಡಬೇಕು ಎಂದು ಕೋರಲಾಗಿತ್ತು.
 
ಇತ್ತೀಚೆಗೆ ರಾಹುಲ್ ಗಾಂಧಿ ಇಂಗ್ಲೆಂಡ್‌‌ನಲ್ಲಿ ಕಂಪೆನಿಯೊಂದು ಆರಂಭಿಸಿದ್ದು, ಕಂಪೆನಿಯ ದಾಖಲೆಗಳಲ್ಲಿ ರಾಹುಲ್ ಗಾಂಧಿ ತಾವು ಬ್ರಿಟನ್ ನಾಗರಿಕರು ಎಂದು ಬ್ರಿಟನ್ ಅಧಿಕಾರಿಗಳ ಮುಂದೆ ಘೋಷಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಆರೋಪಿಸಿದ್ದರು.  
 
ಕಳೆದ ವಾರ ಸ್ವಾಮಿ, ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಬ್ರಿಟನ್‌ನಲ್ಲಿರುವ ಬ್ಯಾಕೊಪ್ಸ್ ಲಿಮಿಟೆಡ್ ಕಂಪೆನಿಯಲ್ಲಿ ರಾಹುಲ್ ತಮ್ಮನ್ನು ತಾವು ಬ್ರಿಟನ್ ನಾಗರಿಕರು ಎಂದು ಘೋಷಿಸಿಕೊಂಡಿದ್ದರಿಂದ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.  
 
ರಾಹುಲ್ ಗಾಂಧಿ ತಮ್ಮ ಜನ್ಮ ದಿನಾಂಕವನ್ನು ಸರಿಯಾಗಿ ನಮೂದಿಸಿದ್ದಾರೆ. ಆದರೆ, ಬ್ರಿಟನ್ ನಾಗರಿಕ ಎಂದು ಘೋಷಿಸಿಕೊಂಡಿದ್ದರಿಂದ ಅವರ ಭಾರತದ ಪೌರತ್ವವನ್ನು ಕಿತ್ತುಕೊಳ್ಳುವುದಲ್ಲದೇ ಅವರ ಲೋಕಸಭೆ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಪ್ರಧಾನಿಗೆ ಒತ್ತಾಯಿಸಿದ್ದಾರೆ.

Share this Story:

Follow Webdunia kannada