Select Your Language

Notifications

webdunia
webdunia
webdunia
webdunia

ಸತ್ತ ಸೊಸೆ ದೆವ್ವವಾಗಿ ಕಾಡುವ ಭೀತಿ: ಶವದ ಕಾಲಿಗೆ ಹೊಡೆದರು ಕಬ್ಬಿಣದ ಮೊಳೆ

ಸತ್ತ ಸೊಸೆ ದೆವ್ವವಾಗಿ ಕಾಡುವ ಭೀತಿ: ಶವದ ಕಾಲಿಗೆ ಹೊಡೆದರು ಕಬ್ಬಿಣದ ಮೊಳೆ
ದಿಮಾನಿ , ಶನಿವಾರ, 25 ಅಕ್ಟೋಬರ್ 2014 (12:05 IST)
ಅಕಾಲ ಮರಣಕ್ಕೀಡಾದ ಸೊಸೆ ಭೂತವಾಗಿ ತಮ್ಮನ್ನು ಕಾಡಬಹುದೆಂಬ ಭಯಕ್ಕೊಳಗಾದ ಆಕೆಯ ಗಂಡನ ಮನೆಯವರು ಶವದ ಕಾಲಿಗೆ ಕಬ್ಬಿಣದ ಮೊಳೆಗಳನ್ನು ಮತ್ತು ಪಿನ್‌ಗಳನ್ನು ಚುಚ್ಚಿದ ಅಸಂಬದ್ಧ, ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. 

ಮಧ್ಯಪ್ರದೇಶದ ಮಾತಾಬಾಸೈಯಾಕ್ಕೆ ಸೇರಿದ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬಳು  ಅನುಮಾನಾಸ್ಪದವಾಗಿ ಸಾವಿಗೀಡಾದಳು.  ಅಕಾಲ ಮರಣಕ್ಕೀಡಾದ ಆಕೆ ದೆವ್ವವಾಗಿ ತಮಗೆ ಕಾಡಬಹುದೆಂಬ ಮೂಡನಂಬಿಕೆಯಿಂದ ಭಯಕ್ಕೊಳಗಾದ ಆಕೆಯ ಗಂಡನ ಮನೆಯವರು ಆಕೆ ಕಾಲಿಗೆ ಪಿನ್‌ಗಳನ್ನು ಚುಚ್ಚಿದರು. ಮೃತ ಶರೀರದ ಅಂತ್ಯಸಂಸ್ಕಾರ ಮಾಡುವ ಮೊದಲು ಆಕೆಯ ತವರಿನ ಕಡೆಯವರು ಸ್ಥಳಕ್ಕೆ ಆಗಮಿಸಿದ್ದರಿಂದ ಈ ಅಂಧ ಆಚರಣೆ ಬೆಳಕಿಗೆ ಬಂದಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಹೇಳುತ್ತದೆ.  
 
ಮೃತಳ ತವರಿನ ಕಡೆಯವರನ್ನು ಕಂಡ ಕೂಡಲೇ ಗಂಡನ ಮನೆಯವರೆಲ್ಲ ಸ್ಥಳದಿಂದ ಪರಾರಿಯಾದರು. ಆಕೆಯ ಸಾವು ಹೇಗಾಗಿದೆ ಎಂಬುದು ಇನ್ನು ಕೂಡ ಬಹಿರಂಗಗೊಂಡಿಲ್ಲ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತಿಮ ವರದಿ ಬಂದ ನಂತರವೇ ಸತ್ಯ ಬಹಿರಂಗಗೊಳ್ಳಲಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಹೊಟ್ಟೆಯಲ್ಲಿ ಗಾಯವಿದ್ದು, ಉದರಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಆಕೆ ಸಾವಿಗೀಡಾಗಿರಬಹುದು ಎಂದು ಹೇಳಿದ್ದಾರೆ. 
 
ದೊರೆತಿರುವ ಮಾಹಿತಿಗಳ ಪ್ರಕಾರ ಮಾತಾಬಾಸೈಯಾಕ್ಕೆ ಸೇರಿದ ಬಸೈಯಾ ಕ್ಷೇತ್ರದ ಚಂದ್ರಪುರಾ ಗ್ರಾಮದ ನಿವಾಸಿಯಾದ ಜಿತೇಂದ್ರ ಗುರ್ಜರ್ ಎಂಬುವವರ ಪತ್ನಿ ಆರತಿ (22)  ಕಳೆದ ಬುಧವಾರ ಅನುಮಾನಾಸ್ಪದವಾಗಿ ಮರಣ ಹೊಂದಿದ್ದಳು.
 
ಅಕಾಲ ಮರಣಕ್ಕೀಡಾದ ಆಕೆ ದೆವ್ವವಾಗಿ ತಮ್ಮನ್ನು ಕಾಡುತ್ತಾಳೆ ಎಂಬ ಮೂಢನಂಬಿಕೆಗೊಳಗಾದ ಆಕೆಯ ಗಂಡನ ಕಡೆಯವರು ಆಕೆಯ ಕಾಲಿಗೆ ಮೊಳೆಗಳನ್ನು ಹೊಡೆದರು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.
 
ಮೃತಳ ತವರಿನ ಕಡೆಯವರು ವರದಕ್ಷಿಣೆ ಕೊಡದ ಕಾರಣಕ್ಕೆ ಆಕೆಯನ್ನು ಕೊಲ್ಲಲಾಗಿದೆ ಎಂದು ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Share this Story:

Follow Webdunia kannada