Select Your Language

Notifications

webdunia
webdunia
webdunia
webdunia

ಟಾಲ್ಗೊ ಪ್ರಯೋಗ ಯಶಸ್ವಿ: 12ಗಂಟೆಗಳಲ್ಲಿ ದೆಹಲಿ ಟು ಮುಂಬೈ

ಟಾಲ್ಗೊ ಪ್ರಯೋಗ ಯಶಸ್ವಿ: 12ಗಂಟೆಗಳಲ್ಲಿ ದೆಹಲಿ ಟು ಮುಂಬೈ
ನವದೆಹಲಿ , ಭಾನುವಾರ, 11 ಸೆಪ್ಟಂಬರ್ 2016 (17:21 IST)
ನವದೆಹಲಿಯಿಂದ ಹೊರಟಿದ್ದ ಸೂಪರ್ ಫಾಸ್ಟ್ ಟಾಲ್ಗೊ ರೈಲು 12 ಗಂಟೆ ಅವಧಿಯಲ್ಲಿ ಮುಂಬೈಗೆ ತಲುಪಿದ್ದು ಅಂತಿಮ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.

ನವದೆಹಲಿ ನಿಲ್ದಾಣದಿಂದ ಶನಿವಾರ ಮಧ್ಯಾಹ್ನ 2.45ಕ್ಕೆ ನಿರ್ಗಮಿಸಿದ ರೈಲು ಮರುದಿನ ಮುಂಜಾನೆ 2.34 ಗಂಟೆಗೆ ಮುಂಬೈ ತಲುಪಿದೆ. ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣವನ್ನು ನಾಲ್ಕು ಗಂಟೆಗಳಿಗೆ ತಗ್ಗಿಸಿ, ಪ್ರಯಾಣಿಕರ ಗಮ್ಯಸ್ಥಾನವನ್ನು 12 ಗಂಟೆಯಲ್ಲಿ ತಲುಪಲು ಸಾಧ್ಯವಾಗುತ್ತದೆಯೇ ಎಂಬುದನ್ನು ಖಚಿತ ಪಡಿಸಲು ಸ್ಪ್ಯಾನಿಷ್ ಟಾಲ್ಗೊ ರೈಲಿನ ಕೊನೆಯ ಪರೀಕ್ಷಾರ್ಥ ಸಂಚಾರವನ್ನು ಶನಿವಾರ ಕೈಗೊಳ್ಳಲಾಗಿತ್ತು.
 
ಈ ಹಿಂದೆ ಭಾರತೀಯ ರೈಲ್ವೆ ಇಲಾಖೆ, ಇದೇ ಟಾಲ್ಗೊ ರೈಲಿನ ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಉತ್ತರಪ್ರದೇಶದ ಬರೇಲಿ-ಮೊರಾದಾಬಾದ್ ನಡುವೆ, ಎರಡನೇ ಪ್ರಾಯೋಗಿಕ ಪರೀಕ್ಷೆಯನ್ನು ಪಲ್ವಾಲ್-ಮಥುರಾ ನಡುವೆ ಕೈಗೊಂಡಿತ್ತು.
 
ಗಂಟೆಗೆ 200 ಕೀಲೋಮೀಟರ್ ಓಡಬಲ್ಲ ಸಾಮರ್ಥ್ಯ ಹೊಂದಿರುವ ಬೋಗಿಗಳನ್ನು ಸ್ಪೇನ್ ಕಂಪನಿಯಾದ ಟಾಲ್ಗೊದಿಂದ ಕಳೆದ ಏಪ್ರಿಲ್ ತಿಂಗಳಲ್ಲಿ ಆಮದು ಮಾಡಿಕೊಳ್ಳಲಾಗಿತ್ತು.
 
ಈ ಯಶಸ್ವಿ ಪ್ರಯೋಗದ ಮೂಲಕ ಮೂಲಕ ಹಳಿ ಬದಲಾವಣೆ ಮಾಡದೇ ಹಾಲಿ ಇರುವ ಹಳಿಗಳಲ್ಲೇ ಹೈ ಸ್ಪೀಡ್ ರೈಲು ಓಡಿಸುವ ಇಲಾಖೆಯ ಯತ್ನ ನಿರೀಕ್ಷೆಯಂತೆ ಯಶ ಕಂಡಿದೆ. ರೈಲು 1,400 ಕೀಲೋಮೀಟರ್ ದೂರವನ್ನು ಕೇವಲ 12 ಗಂಟೆಗಳಲ್ಲಿ ಕ್ರಮಿಸಿದೆ.  ರಾಜಧಾನಿ ಎಕ್ಸಪ್ರೆಸ್ ಈ ದೂರವನ್ನು ಕ್ರಮಿಸಲು 16 ಗಂಟೆ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ವಿಸರ್ಜನೆ ವೇಳೆ ಬೋಟ್ ಮುಳುಗಡೆ: ಶಾಸಕ ಸೇರಿದಂತೆ 11 ಜನ ಸುರಕ್ಷಿತ