Webdunia - Bharat's app for daily news and videos

Install App

ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತು: ಅತ್ಯಾಚಾರ ಪ್ರಕರಣಗಳ ಏರಿಕೆಗೆ ಕಾರಣ ! (ವಿಡಿಯೋ)

Webdunia
ಗುರುವಾರ, 3 ಸೆಪ್ಟಂಬರ್ 2015 (11:50 IST)
ಭಾರತದ ರಾಜಕಾರಣಿಗಳು ಇತ್ತೀಚಿಗೆ ಲೈಂಗಿಕ ಆಕ್ರಮಣ ಮತ್ತು ಲೈಂಗಿಕತೆ ಕುರಿತು ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುವುದರಲ್ಲಿ ತಾ ಮುಂದು ನೀ ಮುಂದು ಎನ್ನುವಂತೆ ವರ್ತಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಸಾಮೂಹಿಕ ಅತ್ಯಾಚಾರ ನಡೆಯಲು ಸಾಧ್ಯವೇ ಇಲ್ಲವೆಂದಿದ್ದರು. ಜೆಡಿಯು ವರಿಷ್ಠ ಶರದ್ ಯಾದವ್ ನಮ್ಮಲ್ಲಿ ಯಾರು ಹುಡುಗಿಯರ ಹಿಂದೆ ಹೋಗಿಲ್ಲ ಎಂದಿದ್ದರು. ಇದೀಗ ಸಿಪಿಎಂ ನಾಯಕರೊಬ್ಬರು ಇಂತಹದೇ ಅಸಂಬದ್ಧ ಹೇಳಿಕೆಯನ್ನು ನೀಡಿದ್ದಾರೆ. ಅವರು ಗುರಿ ಮಾಡಿರುವುದು ಬಾಲಿವುಡ್ ತಾರೆ ಸನ್ನಿ ಲಿಯೋನ್‌ರನ್ನು. 

ನೀಲಿ ಚಿತ್ರ ತಾರೆ ಸನ್ನಿ ಲಿಯೋನ್‌ ಅಭಿನಯಿಸಿರುವ ಕಾಂಡೋಮ್ ಜಾಹಿರಾತಿನ ಪರಿಣಾಮ ಭಾರತದಲ್ಲಿ ಅತ್ಯಾಚಾರದ ಪ್ರಕರಣಗಳಲ್ಲಿ ಏರಿಕೆಯಾಗಿದೆ  ಎಂದು ಹೇಳುವುದರ ಮೂಲಕ  ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಅತುಲ್ ಕುಮಾರ್ ಅಂಜನ್ ವಿವಾದವನ್ನು ಹುಟ್ಟುಹಾಕಿದ್ದಾರೆ. 
 
ಗಾಜಿಪುರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಪಿಎಂ ನಾಯಕ, 'ಸನ್ನಿ ಲಿಯೋನ್ ಎಂಬ ಹೆಸರಿನ ಮಹಿಳೆಯಿದ್ದಾಳೆ. ನಗ್ನ ಸಿನಿಮಾಗಳ ನಾಯಕಿಯಾಗಿರುವ ಆಕೆ ಅಭಿನಯಿಸಿದ ಕಾಂಡೋಮ್ ಜಾಹೀರಾತೊಂದು ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಅದು ಉದ್ರೇಕಕಾರಿಯಾಗಿದೆ. ಈ ರೀತಿಯ ಜಾಹೀರಾತನ್ನು ಟಿವಿ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಿದರೆ, ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಲಿವೆ', ಎಂದು ಅತುಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
'ಈ ಕಾಂಡೋಮ್ ಜಾಹೀರಾತು ಲೈಂಗಿಕತೆಯನ್ನು ಉದ್ರೇಕಿಸುತ್ತದೆ. ನಾನು ನನ್ನ ಜೀವಮಾನದಲ್ಲಿ ಒಂದೇ ಒಂದು ನೀಲಿಚಿತ್ರವನ್ನು ನೋಡಿಲ್ಲ. ಆದರೆ ಈ ಜಾಹೀರಾತು ನೋಡಿ ಎರಡು ನಿಮಿಷದಲ್ಲಿಯೇ ವಾಂತಿ ಬರುವಂತಾಯಿತು. ಅಷ್ಟು ಕೆಟ್ಟದಾಗಿತ್ತು', ಎಂದು ಅವರು ಹೇಳಿದ್ದಾರೆ.
 
ಅವರು ಮಾತನಾಡಿರುವ ಭಾಷಣದ ವಿಡಿಯೋ ಕ್ಲಿಪ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಚಿವರ ವಿಲಕ್ಷಣ ಹೇಳಿಕೆಗೆ ಟೀಕೆಗಳ ಮಹಾಪುರ ಹರಿದು ಬಂದಿದೆ. ಜತೆಗೆ ಹಲವರು ಸಿಪಿಐ ಮುಖಂಡನ ಅಭಿಪ್ರಾಯಕ್ಕೆ  ಸಹಮತವನ್ನೂ ವ್ಯಕ್ತಪಡಿಸಿದ್ದಾರೆ.
 
ಕೆನಡಾ ಮೂಲದ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ತಳವೂರುವ ಪ್ರಯತ್ನ ನಡೆಸುತ್ತಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 
ಸಿಪಿಎಂ ನಾಯಕನ ಭಾಷಣದ ವಿಡಿಯೋ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ