Select Your Language

Notifications

webdunia
webdunia
webdunia
webdunia

ಸುನಂದಾ ಪುಷ್ಕರ್ ಹತ್ಯೆ ಪ್ರಕರಣ: ಶಶಿ ತರೂರ್‌ಗೆ ಪಾಲಿಗ್ರಾಫ್ ಪರೀಕ್ಷೆಗೊಳಪಡಿಸಲಿರುವ ದೆಹಲಿ ಪೊಲೀಸ್

ಸುನಂದಾ ಪುಷ್ಕರ್ ಹತ್ಯೆ ಪ್ರಕರಣ: ಶಶಿ ತರೂರ್‌ಗೆ ಪಾಲಿಗ್ರಾಫ್ ಪರೀಕ್ಷೆಗೊಳಪಡಿಸಲಿರುವ ದೆಹಲಿ ಪೊಲೀಸ್
ನವದೆಹಲಿ , ಮಂಗಳವಾರ, 30 ಜೂನ್ 2015 (18:16 IST)
ಪತ್ನಿ ಸುನಂದಾ ಪುಷ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಶಶಿ ತರೂರ್ ಅವರನ್ನು ದೆಹಲಿ ಪೊಲೀಸರ ವಿಶೇಷ ತನಿಖಾ ತಂಡ ಪಾಲಿಗ್ರಾಫ್ ಟೆಸ್ಟ್‌ಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.   
 
ಪ್ರಸಕ್ತ ತಿಂಗಳ ಪ್ರಾರಂಭದಲ್ಲಿ ಹೈಪ್ರೋಫೆಲ್ ಹತ್ಯೆ ಪ್ರಕರಣದಲ್ಲಿ ಆರು ಆರೋಪಿಗಳಿಗೆ ಪಾಲಿಗ್ರಾಫ್ ಪರೀಕ್ಷೆಗೊಳಪಡಿಸಲಾಗಿದೆ. 
 
ಪೊಲೀಸ್ ಮೂಲಗಳ ಪ್ರಕಾರ, ತರೂರ್ ಮನೆಯಲ್ಲಿ ಕೆಲಸ  ಮಾಡುತ್ತಿದ್ದ ನಾರಾಯಣ್ ಸಿಂಗ್, ಮತ್ತು ಚಾಲಕ ಬಜರಂಗಿ ಹಾಗೂ ಆತನ ಗೆಳೆಯ ಸಂಜಯ್ ಧವನ್‌, ಎಸ್.ಕೆ.ಶರ್ಮಾ, ವಿಕಾಸ್ ಅಹ್ಲಾವಟ್ ಮಚ್ಚು ಸುನೀಲ್ ಠಕ್ರುನನ್ನು ಪಾಲಿಗ್ರಾಫ್ ಪರಿಕ್ಷೆಗೆೊಳಪಡಿಸಲಾಗಿತ್ತು. 
 
ಪಾಲಿಗ್ರಾಫ್ ಪರೀಕ್ಷೆಯಲ್ಲಿ ಆರೋಪಿಗಳಿಗೆ ಪುಷ್ಕರ್ ದೇಹದ ಮೇಲಿದ್ದ ಗಾಯಗಳು ಸೇರಿದಂತೆ ಮಹತ್ವದ 100 ಪ್ರಶ್ನೆಗಳನ್ನು ಕೇಳಲಾಯಿತು. ತರೂರ್ ದಂಪತಿಗಳ ಸಂಬಂಧ ಮತ್ತು ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್ ಅವರ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಯಿತು ಎಂದು ಮೂಲಗಳು ತಿಳಿಸಿವೆ. 
 
ಕಳೆದ 2010ರಲ್ಲಿ ಶಶಿ ತರೂರ್ ಅವರನ್ನು ವಿವಾಹವಾಗಿದ್ದ ಸುನಂದಾ ಪುಷ್ಕರ್, ಚಾಣಕ್ಯಪುರಿಯಲ್ಲಿರುವ ಲೀಲಾ ಹೋಟೆಲ್‌ನಲ್ಲಿ ಸಾವಿಗೆ ಶರಣಾಗಿದ್ದರು.  
 

Share this Story:

Follow Webdunia kannada