Select Your Language

Notifications

webdunia
webdunia
webdunia
webdunia

ಅತ್ಯಾಚಾರ ಪ್ರಕರಣ: ಆಸಾರಾಂ ಬಾಪು ಪರ ಕೋರ್ಟ್‌ನಲ್ಲಿ ಹೋರಾಡಲಿದ್ದಾರೆ ಸುಬ್ರಮಣಿಯನ್ ಸ್ವಾಮಿ

ಅತ್ಯಾಚಾರ ಪ್ರಕರಣ: ಆಸಾರಾಂ ಬಾಪು ಪರ ಕೋರ್ಟ್‌ನಲ್ಲಿ ಹೋರಾಡಲಿದ್ದಾರೆ ಸುಬ್ರಮಣಿಯನ್ ಸ್ವಾಮಿ
ನವದೆಹಲಿ , ಶುಕ್ರವಾರ, 24 ಏಪ್ರಿಲ್ 2015 (15:13 IST)
ಅತ್ಯಾಚಾರ ಪ್ರಕರಣದಡಿ ಜೋಧ್ಪುರ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸವನ್ನು ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪುರವರ ಪರವಾಗಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಾದ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. 

ಜೈಲಿನಲ್ಲಿ ಬಾಪುರವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಸ್ವಾಮಿ ನಾನು ನಿಮ್ಮ ಪರವಾಗಿ ನ್ಯಾಯಾಲಯದಲ್ಲಿ ಹೋರಾಡುವುದಾಗಿ ಭರವಸೆ ನೀಡಿದ್ದಾರೆ. 
 
"ಜಾಮೀನು ಪಡೆಯುವುದು ಆಸಾರಾಂ ಅವರ ಮೂಲಭೂತ ಹಕ್ಕು.ಈ ದಿಶೆಯಲ್ಲಿ ಕೆಳ ಹಂತದ ನ್ಯಾಯಾಲಯದಲ್ಲಿ ತಾನು ಅರ್ಜಿ ಸಲ್ಲಿಸುತ್ತೇನೆ ಮತ್ತು ಅವರ ಪ್ರಕರಣದಲ್ಲಿ ತಾನು ಹೋರಾಡುತ್ತೇನೆ", ಎಂದು ಸ್ವಾಮಿ ಹೇಳಿದ್ದಾರೆ. 
 
ಆಸಾರಾಂ ಅವರ ಪ್ರಕರಣವನ್ನು ಲಾಲು ಪ್ರಸಾದ್ ಯಾದವ್, ಜಯಲಲಿತಾ ಅವರ ಪ್ರಕರಣಗಳಿಗೆ ಹೋಲಿಸಿದ ಸ್ವಾಮಿ ಅವರು ತಪ್ಪು ಮಾಡಿಯೂ ಜೈಲಿನಿಂದ ಹೊರಗಿರುತ್ತಾರೆ ಎಂದಾದರೆ ಆಸಾರಾಂ ಅವರು ಏಕೆ ಜೈಲಿನಿಂದ ಹೊರಗಿರಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. 
 
ಸ್ವಾಮಿ ತಮ್ಮನ್ನು ಭೇಟಿಯಾಗಿರುವುದರ ಕುರಿತು ಸಂತಸ ವ್ಯಕ್ತಪಡಿಸಿರುವ ಆಸಾರಾಂ, ತಮ್ಮ ಪ್ರಕರಣದಲ್ಲಿ ಸ್ವಾಮಿ ಏನಾದರೂ ಚಮತ್ಕಾರವನ್ನು ಮಾಡಬಲ್ಲರು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada