ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭೆಯ ನಾಮಕರಣಗೊಂಡ ಸಂಸದ ಸುಬ್ರಮಣ್ಯ ಸ್ವಾಮಿ ಸದಾ ಸುದ್ದಿಮಾಡುವುದರಲ್ಲಿ ನಿಸ್ಸೀಮರು. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯನ್ನು ನಾಯಿಯ ಬಾಲಕ್ಕೆ ಹೋಲಿಸಿ ಅದನ್ನು ನೇರವಾಗಿಸುವುದು ಸಾಧ್ಯವಿಲ್ಲವೆಂದು ತಿಳಿಸುವ ಮೂಲಕ ಮತ್ತೊಂದು ಸುದ್ದಿ ಮಾಡಿದ್ದಾರೆ.
ಮೆಹಬೂಬಾ ಜಾಗದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಸೂಕ್ತ. ಅವರು ನಾಯಿಯ ಬಾಲದಂತಿದ್ದು, ಅದನ್ನು ನೇರಗೊಳಿಸುವುದು ಸಾಧ್ಯವಿಲ್ಲ ಎಂದು ಸ್ವಾಮಿ ಹೇಳಿದರು.
ಮೆಹಬೂಬಾ ಬದಲಾಗುವುದೇ ಇಲ್ಲ ಎಂದು ಹೇಳಿದ ಸ್ವಾಮಿ ಭಯೋತ್ಪಾದಕರ ಜತೆ ಅವರು ಹಳೆಯ ಕೊಂಡಿಗಳನ್ನು ಹೊಂದಿದ್ದಾರೆಂದು ಪ್ರತಿಪಾದಿಸಿದರು. ಮೆಹಬೂಬಾ ಸುಧಾರಿಸುತ್ತಾರೆಂಬ ನಂಬಿಕೆ ಮೇಲೆ ಬಿಜೆಪಿ ಮೆಹಬೂಬಾ ಜತೆ ಸಮ್ಮಿಶ್ರ ಸರ್ಕಾರವನ್ನು ರಚಿಸಿದೆ ಎಂದು ಹೇಳಿದರು.
ಮೆಹಬೂಬಾ ಮತ್ತು ಪ್ರಧಾನಿ ಮೋದಿ ನಡುವೆ ಕಳೆದ ವಾರ ಭೇಟಿ ನಡೆದು ಭಯೋತ್ಪಾದನೆ ನಿಗ್ರಹಕ್ಕೆ ಮತ್ತು ಜನಪ್ರಿಯ ಬೇಡಿಕೆಗಳ ಇತ್ಯರ್ಥಕ್ಕೆ ಏಕರೂಪ ಗುರಿಗೆ ಸಮ್ಮತಿಸಿದ ಬೆನ್ನ ಹಿಂದೆ ಸ್ವಾಮಿ ಕಾಮೆಂಟ್‌ಗಳು ಹೊರಬಿದ್ದಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ