Select Your Language

Notifications

webdunia
webdunia
webdunia
webdunia

15 ವರ್ಷದ ಬಾಲಕಿಯ ವಿವಾಹ ನಿಲ್ಲಿಸಿದ ಸಹಪಾಠಿ ವಿದ್ಯಾರ್ಥಿಗಳು

15 ವರ್ಷದ ಬಾಲಕಿಯ ವಿವಾಹ ನಿಲ್ಲಿಸಿದ ಸಹಪಾಠಿ ವಿದ್ಯಾರ್ಥಿಗಳು
ಚೆನ್ನೈ , ಶನಿವಾರ, 24 ಜನವರಿ 2015 (16:22 IST)
10ನೇ ತರಗತಿಯ ವಿದ್ಯಾರ್ಥಿಗಳು ಚಾಣಾಕ್ಷತನ ಮೆರೆದು ಪೊಲೀಸರಿಗೆ ಸಕಾಲದಲ್ಲಿ ಮಾಹಿತಿ ನೀಡಿ 15 ವರ್ಷ ವಯಸ್ಸಿನ ತಮ್ಮ ಸಹಪಾಠಿ ವಿದ್ಯಾರ್ಥಿನಿಯೊಬ್ಬಳ ವಿವಾಹವನ್ನು ನಿಲ್ಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  
 
ನಗರದ ವ್ಯಾಸರಪಾಡಿಯ ನಿವಾಸಿಯಾಗಿದ್ದ 34 ವರ್ಷ ವಯಸ್ಸಿನ ವ್ಯಕ್ತಿಗೆ 15 ವರ್ಷ ವಯಸ್ಸಿನ ಬಾಲಕಿಯ ಪೋಷಕರು ಒತ್ತಾಯಪೂರ್ವಕವಾಗಿ ವಿವಾಹಕ್ಕೆ ಮುಂದಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  
 
ಪೊಲೀಸ್ ತನಿಖಾಧಿಕಾರಿಯ ಪ್ರಕಾರ ಬಾಲಕಿಯ ಪೋಷಕರು ದಿನಗೂಲಿಗಳಾಗಿದ್ದು ಬಾಲಕಿ ಸರಕಾರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ವರದಕ್ಷಿಣೆಯಿಲ್ಲದೇ ವಿವಾಹವಾಗುತ್ತೇನೆ ಎಂದು ಆಮಿಷ ತೋರಿಸಿದ್ದ ಆರೋಪಿ ತ್ಯಾಗರಾಜನ್ ಪ್ರಸ್ತಾವಕ್ಕೆ ಪೋಷಕರು ಒಪ್ಪಿ ವಿವಾಹಕ್ಕೆ ಮುಂದಾಗಿದ್ದರು.  
 
ವಿವಾಹಕ್ಕೆ ಮೂರು ದಿನಗಳ ಹಿಂದೆ ಬಾಲಕಿ ತನ್ನ ಗೆಳತಿಗೆ ವಿವಾಹದ ಬಗ್ಗೆ ಮಾಹಿತಿ ನೀಡಿದ್ದಳು. ಇದರಿಂದ ಬೇಸರಗೊಂಡ ಗೆಳತಿ, ತನ್ನ ಸಹಪಾಠಿಗಳೊಂದಿಗೆ ಚರ್ಚಿಸಿ, ಹಿರಿಯರಿಗೆ ಹಾಗೂ ನಿವೃತ್ತ ಪೊಲೀಸ್‌ರೊಬ್ಬರ ನೆರವು ಪಡೆದು ಸೆಂಬಿಯಮ್ ಪೊಲೀಸ್ ಠಾಣೆಗೆ ದೂರು ನೀಡಿ ವಿವಾಹ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾಳೆ. 

Share this Story:

Follow Webdunia kannada