Select Your Language

Notifications

webdunia
webdunia
webdunia
webdunia

ಕಳ್ಳತನದಲ್ಲೂ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ

ಕಳ್ಳತನದಲ್ಲೂ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ
ಪುದುಕೊಟ್ಟೈ , ಗುರುವಾರ, 27 ಆಗಸ್ಟ್ 2015 (12:11 IST)
ವೈಭೋಗದ ಜೀವನ ನಡೆಸಲು ಇಂದಿನ ಯುವ ಜನಾಂಗ ಕಳ್ಳತನ, ಕೊಲೆಯಂತಹ ಅಪರಾಧಿ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ತಮಿಳುನಾಡಿನಲ್ಲಿ ಒಬ್ಬ ವಿದ್ಯಾರ್ಥಿ ಕಳ್ಳತನದಲ್ಲೂ ಪ್ರಾಮಾಣಿಕತೆ ಮೆರೆದು ಗಮನಸೆಳೆದಿದ್ದಾನೆ. ಆತ ಕಳ್ಳತನ ಮಾಡಿದ್ದು ಏಕೆ ಎಂಬ ಕಾರಣ ಸಹ ಓದುಗರ ಕಣ್ಣಲ್ಲಿ ನೀರು ತರಿಸುವಂತಿದೆ. 

ಹೌದು..ತಮಿಳುನಾಡಿನ ಪೆರಿಯಾರ ನಗರದಲ್ಲಿ ಈ ಘಟನೆ ನಡೆದಿದ್ದು,ವಿದ್ಯಾರ್ಥಿಯೋರ್ವ ತನ್ನ ತಾಯಿಯ ಚಿಕಿತ್ಸೆಗೆ ಹಣವಿಲ್ಲದಾದಾಗ ಕಳ್ಳತನಕ್ಕೆ ಕೈ ಹಾಕಿದ್ದಾನೆ. ಆದರೆ ಆತನ ತಾಯಿ ಬದುಕುಳಿಯಲಿಲ್ಲ. ಹೀಗಾಗಿ ಕದ್ದ ಹಣವನ್ನಾತ ಮರಳಿ ನೀಡಿದ್ದಾನೆ. 
 
ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿರುವ ಯುವಕನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗಾಗಿ ಆತ ನಿವೃತ್ತ ಉಪ ತಹಶೀಲ್ದಾರ್ ರಾಜಮಾನಿಕಮ್ (75) ಅವರ ಮನೆಯಿಂದ ಆತ ಹಣ ಕದ್ದಿದ್ದ. ನೀರು ಕುಡಿಯುವ ನೆಪದಲ್ಲಿ ಮನೆ ಒಳಗೆ ಬಂದಿದ್ದ ಆತ ತಹಶೀಲ್ದಾರ್ ಪತ್ನಿ ನೀರು ತರಲು ಒಳಗೆ ಹೋದಾಗ ಟೇಬಲ್ ಮೇಲೆ ಇಟ್ಟಿದ್ದ 5 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದ. ಈ ಕುರಿತು ತಹಶೀಲ್ದಾರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ತಾವು ಆಗ ತಾನೇ ಬ್ಯಾಂಕ್‌ನಿಂದ ತಂದಿದ್ದ ಹಣವನ್ನು ಅಪರಿಚಿತ ಯುವಕನೊಬ್ಬ ಕದ್ದು ಪರಾರಿಯಾಗಿದ್ದಾನೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದರು.
 
ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ನಿನ್ನೆ ಮೋಟಾರ್ ಬೈಕ್‌ನಲ್ಲಿ ವೃದ್ಧ ತಹಶೀಲ್ದಾರ್ ದಂಪತಿಗಳ ಮನೆಗೆ ಬಂದ ಯುವಕ ತನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸಿದ ಮತ್ತು ಕದ್ದ 5 ಲಕ್ಷದಲ್ಲಿ 4.5 ಲಕ್ಷ ಹಣವನ್ನು ಮರಳಿಸಿದ ಮತ್ತು ಉಳಿದ 50,000 ಹಣಕ್ಕೆ ಬದಲಾಗಿ ತನ್ನ ಬೈಕ್ ಇಟ್ಟುಕೊಳ್ಳುವಂತೆ ಹೇಳಿದ್ದಾನೆ. ತಾಯಿಯ ಚಿಕಿತ್ಸೆಗೆ 50 ಸಾವಿರ ಖರ್ಚಾಗಿರುವುದರಿಂದ 4.5 ಲಕ್ಷ ರೂ ಹಣವನ್ನಾತ ಮರಳಿಸಿದ್ದಾನೆ.
 
ಹಣ ಮರಳಿ ಸಿಕ್ಕಿರುವುದರಿಂದ ಆತನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ದಂಪತಿಗಳು ವಾಪಸ್ ತೆಗೆದುಕೊಂಡಿದ್ದಾರೆ.
 
ವಿಚಾರಣೆ ನಡೆಸಿದ ಬಳಿಕ ವಿದ್ಯಾರ್ಥಿಯನ್ನು ಬಿಡುಗಡೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada