Webdunia - Bharat's app for daily news and videos

Install App

ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಆರೋಪಿಗಳು

Webdunia
ಗುರುವಾರ, 29 ಸೆಪ್ಟಂಬರ್ 2016 (20:46 IST)
ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ನಂತರ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ ಹೇಯ ಘಟನೆ ವರದಿಯಾಗಿದೆ. ಒಂದು ವೇಳೆ, ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಆಸಿಡ್ ದಾಳಿ ನಡೆಸುವುದಾಗಿ ಆರೋಪಿಗಳು ಬೆದರಿಕೆಯೊಡ್ಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಕಾನೂನು ಪದವಿ ಪ್ರವೇಶ ಪರೀಕ್ಷೆ ಬರೆಯುತ್ತಿದ್ದ ನಗರದ ಅರೋರಾ ಕಾಲೇನಿಯಾ ನಿವಾಸಿಯಾದ 18 ವರ್ಷ ವಯಸ್ಸಿನ ಯುವತಿ ಕಾಲೇಜು ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ. 
 
ಕಳೆದ ಎರಡು ವರ್ಷಗಳ ಹಿಂದೆ ಯುವತಿ ಬರ್ತಡೇ ಪಾರ್ಟಿಯಲ್ಲಿ ರೂಪೇಶ್ ಜಸ್ವಾಲ್‌ ಎಂಬಾತನನ್ನು ಭೇಟಿಯಾಗಿದ್ದಳು, ಸುಮಾರು ಆರು ತಿಂಗಳ ನಂತರ ರೂಪೇಶ್ ಆಕೆಯನ್ನು ಇಂದೋರ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.
 
ಇಂದೋರ್‌ನಿಂದ ಭೋಪಾಲ್‌ಗೆ ಮರಳಿದ ನಂತರವೂ ರೂಪೇಶ್ ಹಲವಾರು ಬಾರಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ, ಗರ್ಭವತಿಯಾದ ಮಾಹಿತಿ ತಿಳಿದು ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ನಿನ್ನೆ ಯುವತಿ ತನ್ನ ತಾಯಿಯೊಂದಿಗೆ ಶಾಪಿಂಗ್‌ಗಾಗಿ ಮಾರುಕಟ್ಟೆಗೆ ತೆರಳಿದ್ದಾಗ ಅಲ್ಲಿಗೆ ತನ್ನ ಮೂವರು ಗೆಳೆಯರೊಂದಿಗೆ ಬಂದ ರೂಪೇಶ್, ಒಂದು ವೇಳೆ, ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದೂರು ನೀಡಿದಲ್ಲಿ ಆಸಿಡ್ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾನೆ. ತಾಯಿಯೊಂದಿಗೆ ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದರಿಂದ ಯುವತಿ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ.  
 
ಆರೋಪಿಗಳ ವಿರುದ್ಧ ಅತ್ಯಾಚಾರ, ದುರ್ವರ್ತನೆ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಬೆಳಗಾವಿಯಲ್ಲಿ ವಿಜಯ್ ಶಾ ವಿರುದ್ಧ ದೂರು

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಮುಂದಿನ ಸುದ್ದಿ
Show comments