Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿನಿಯ ಮೇಲೆ 6 ಜನರಿಂದ ಸಾಮೂಹಿಕ ಅತ್ಯಾಚಾರ

ವಿದ್ಯಾರ್ಥಿನಿಯ ಮೇಲೆ 6 ಜನರಿಂದ ಸಾಮೂಹಿಕ ಅತ್ಯಾಚಾರ
ಪಾಟ್ಣಾ , ಶನಿವಾರ, 22 ನವೆಂಬರ್ 2014 (15:47 IST)
ಕಾಲೇಜು ವಿದ್ಯಾರ್ಥಿನಿಯೋರ್ವಳ ಮೇಲೆ 6 ಜನರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಪಾಟ್ಣಾದಿಂದ 38 ಕೀಲೋಮೀಟರ್ ದೂರದಲ್ಲಿರುವ ಬಿಹ್ತಾದಲ್ಲಿ ವರದಿಯಾಗಿದೆ.

ಕಳೆದ ಶುಕ್ರವಾರ ಯುವತಿ  ಒಂದು ಸಣ್ಣ ಸೇತುವೆ ಬಳಿ ತನ್ನ ಗೆಳೆಯನನ್ನು ಭೇಟಿಯಾಗಲು ಹೋಗಿದ್ದಳು. ಆ ಸಮಯದಲ್ಲಿ ಅವರನ್ನು ಸುತ್ತುವರೆದ 6 ಜನ ಪುಂಡರ ಗುಂಪು, ಆಕೆಯನ್ನು ಹತ್ತಿರದ ಪೊದೆಯೊಂದರ ಬಳಿ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಭೋಜ್ಪುರ್ ಜಿಲ್ಲೆಯ ನಿವಾಸಿಯಾದ ಯುವತಿ ಮಹಾದಲಿತ ಸಮುದಾಯಕ್ಕೆ ಸೇರಿದಳಾಗಿದ್ದು, ಪರೀಕ್ಷೆಗಾಗಿ ತಯಾರಿ ನಡೆಸಲು ಬಿಹ್ತಾದಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. 
 
ಉರುವಲು ಕಟ್ಟಿಗೆಗಳನ್ನು ಸಂಗ್ರಹಿಸಲು ಕಾಡಿಗೆ ಬಂದಿದ್ದ ಮಹಿಳೆಯೊಬ್ಬರಿಗೆ ಯುವತಿಯ ಕಿರುಚಾಟ ಕೇಳಿಸಿದೆ.  ಆಕೆ ಹಳ್ಳಿಯ ಜನರಿಗೆ ಈ ಕುರಿತು ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಹಳ್ಳಿಯ ಜನ ಕಟುಕರ ಕೈಯಿಂದ ಯುವತಿಯನ್ನು ಪಾರು ಮಾಡಿದ್ದಲ್ಲದೇ ಆರೋಪಿಗಳಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಆತನನ್ನು ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ. 
 
ಆತನನ್ನು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು,  ಪರಾರಿಯಾಗಿರುವ ಇಬ್ಬರನ್ನು ಸೆರೆ ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪಾಟ್ಣಾದ ಹಿರಿಯ ಪೊಲೀಸ್ ಅಧೀಕ್ಷಕರಾದ ಜಿತೇಂದ್ರ ರತ್ನಾ ತಿಳಿಸಿದ್ದಾರೆ. 
 
ಆರೋಪಿ ದೀಪಕ್ ನೀಡಿದ ಮಾಹಿತಿಗಳನ್ನಾದರಿಸಿ ಭುರಾ ಯಾದವ್, ರಾಮ್ಜೀ ರೈ, ಸೋನು ಕುಮಾರ್ ಎಂಬುವವರನ್ನು ಬಂಧಿಸಲಾಯಿತು. ಪರಾರಿಯಾಗಿರುವವರನ್ನು ಚುಂಚನ್ ಕುಮಾರ್ ಮತ್ತು ನಂದ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Share this Story:

Follow Webdunia kannada