Select Your Language

Notifications

webdunia
webdunia
webdunia
webdunia

ಮುಸ್ಲಿಮರ ಜನಸಂಖ್ಯೆಗೆ ಕಡಿವಾಣ ಹಾಕುವುದು ಅನಿವಾರ್ಯ: ಪ್ರವೀಣ್ ತೊಗಾಡಿಯಾ

ಮುಸ್ಲಿಮರ ಜನಸಂಖ್ಯೆಗೆ ಕಡಿವಾಣ ಹಾಕುವುದು ಅನಿವಾರ್ಯ: ಪ್ರವೀಣ್ ತೊಗಾಡಿಯಾ
ನವದೆಹಲಿ , ಗುರುವಾರ, 3 ಸೆಪ್ಟಂಬರ್ 2015 (16:47 IST)
ಧರ್ಮ ಆಧಾರಿತ ಜನಗಣತಿ ಸಮೀಕ್ಷೆಯ ಪ್ರಕಾರ ದೇಶದ ಮುಸ್ಲಿಂ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಹಿಂದು ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ, ಒಂದು ವೇಳೆ ಮುಸ್ಲಿಂ ದಂಪತಿಗಳು ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದಲ್ಲಿ ಅಂತಹ ದಂಪತಿಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
 
ಯಾವುದೇ ರೀತಿಯ ರಾಜಕೀಯ ಒತ್ತಡದ ಮಧ್ಯೆಯೂ ಮುಸ್ಲಿಂ ದಂಪತಿಗಳಿಗೆ ಎರಡು ಮಕ್ಕಳು ಹೆರಲು ಮಾತ್ರ ಅವಕಾಶ ನೀಡಬೇಕು. ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದಲ್ಲಿ ಅಂತಹ ಕುಟುಂಬಕ್ಕೆ ರೇಶನ್, ಉದ್ಯೋಗ, ಶಿಕ್ಷಣ ಸೌಲಭ್ಯ ನೀಡಬಾರದು ಎಂದು ಆರೆಸ್ಸೆಸ್ ಮುಖವಾಣಿಯಾದ ಆರ್ಗನೈಸರ್‌ಗೆ ನೀಡಿದ ಸಂದರ್ಶನದಲ್ಲಿ ತೊಗಾಡಿಯಾ ತಿಳಿಸಿದ್ದಾರೆ. 
 
ಮುಸ್ಲಿಂ ಜನಸಂಖ್ಯೆಯಲ್ಲಿ ಹೆಚ್ಚಳ ಮತ್ತು ಹಿಂದುಗಳ ಜನಸಂಖ್ಯೆಯಲ್ಲಿ ಕುಸಿತ ಕುರಿತಂತೆ ಆತಂಕ ವ್ಯಕ್ತಪಡಿಸಿದ ಅವರು, ಅಫ್ಘಾನಿಸ್ತಾನ್, ಇರಾನ್, ಪಾಕಿಸ್ತಾನ, ಬಾಂಗ್ಲಾದೇಶ್, ಉಗಾಂಡಾ ಮತ್ತು ಇತ್ತೀಚೆಗೆ ಕಾಶ್ಮಿರದಲ್ಲಿ ಹಿಂದುಗಳನ್ನು ನಾಶ ಮಾಡಲಾಗಿದೆ. ಭಾರತದಲ್ಲಿ ವ್ಯವಸ್ಥಿತವಾಗಿ ಮುಸ್ಲಿಂ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದೊಂದು ಅಕಸ್ಮಿಕವಲ್ಲ ಎಂದು ಹೇಳಿದ್ದಾರೆ.
 
ದೇಶದ ರಾಜಕಾರಣಿಗಳು ಓಟ್ ಬ್ಯಾಂಕ್ ನೀತಿಗಳನ್ನು ಪಾಲಿಸುತ್ತಿರುವುದರಿಂದ ಮುಸ್ಲಿಂ ಜನಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣವಾಗಿದೆ. ಮುಸ್ಲಿಮರಿಗೆ ದೇಶದ ಕಾನೂನು ಅನ್ವಯವಾಗುತ್ತಿಲ್ಲ. ಹಿಂದುಗಳಿಗೊಂದು ಕಾನೂನು, ಮುಸ್ಲಿಮರಿಗೊಂದು ಕಾನೂನು ಇರುವುದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ವಿಷಾದ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada