ವಿಚಿತ್ರ ಎನಿಸಿದ್ರು ಇದು ಸತ್ಯ : ದೇವಸ್ಥಾನದ ಹೊರಗಿದ್ದ ಚಪ್ಪಲಿ ಕದ್ದವರ ವಿರುದ್ಧ ಎಫ್ಐಆರ್

Webdunia
ಮಂಗಳವಾರ, 11 ಜುಲೈ 2023 (08:16 IST)
ಲಕ್ನೋ : ಬೆಲೆಬಾಳುವ ವಸ್ತುಗಳು ಕಳ್ಳತನವಾದಾಗ ಪೊಲೀಸರಿಗೆ ದೂರು ಕೊಟ್ಟಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಚಪ್ಪಲಿ ಕಳ್ಳತನವಾಗಿದೆ ಎಂದು ಪೊಲೀಸರ ಮೊರೆ ಹೋಗಿ ಇದೀಗ ಎಫ್ಐಆರ್ ದಾಖಲಾದ ಪ್ರಸಂಗವೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
 
ಹೌದು. ವಿಚಿತ್ರವಾದರೂ ಸತ್ಯವಾದ ಈ ಘಟನೆ ನಡೆದಿದ್ದು ಕಾನ್ಪುರ ನಗರದಲ್ಲಿರುವ ಸಿವಿಲ್ ಲೈನ್ ನ ಭೈರವ ಬಾಬಾ ದೇವಸ್ಥಾನದಲ್ಲಿ. ದಬೌಲಿ ನಿವಾಸಿ ಕಾಂತಿಲಾಲ್ ನಿಗಮ್ ಭಾನುವಾರ ಬೆಳಗ್ಗೆ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಾರೆ.

ಚಪ್ಪಲಿಯನ್ನು ದೇವಸ್ಥಾನದ ಹೊರಗೆ ಬಿಟ್ಟು, ಹತ್ತಿರದಲ್ಲೇ ಇದ್ದ ಅಂಗಡಿಯೊಂದರಿಂದ ಪೂಜಾ ಸಾಮಗ್ರಿ ತೆಗೆದುಕೊಂಡು ಹೋಗಿದ್ದಾರೆ. ಅಂತೆಯೇ ದೇವರ ದರ್ಶನ ಪಡೆದು, ಪೂಜೆ ಮುಗಿಸಿಕೊಂಡು ವಾಪಸ್ ಅಂಗಡಿಗೆ ಬಂದಾಗ ಚಪ್ಪಲಿ ಕಾಣದಾಗಿದೆ.

ತಾನು ಇಟ್ಟ ಸ್ಥಳದಲ್ಲಿ ಎಷ್ಟು ಹುಡುಕಾಡಿದರೂ ಚಪ್ಪಲಿ ಕಾಣಿಸಲಿಲ್ಲ. ಹೀಗಾಗಿ ಕಾಂತಿಲಾಲ್ ಪೊಲೀಸರ ಮೊರೆ ಹೋಗಿದ್ದಾರೆ. ನನ್ನ ಚಪ್ಪಲಿ ಕಾಣೆಯಾಗಿದೆ ಎಂದು ಇ-ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ ದೂರು ಸ್ವೀಕರಿಸಿ  ಎಫ್ಆರ್ ದಾಖಲಿಸಿಕೊಂಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾನವಿಯತೆಯೇ ಇಲ್ಲ, ಬೈಕ್ ಸವಾರನಿಗೆ ಕಾರಿನಿಂದ ಢಿಕ್ಕಿ ಹೊಡೆದು ಕೊಂದ ದಂಪತಿ: ವಿಡಿಯೋ

ಸಿದ್ದರಾಮಯ್ಯನವರೇ ನೀವು ಕರ್ನಾಟಕಕ್ಕೆ ಸಿಎಂ, ವಯನಾಡಿನ ವಕ್ತಾರರಲ್ಲ: ಆರ್ ಅಶೋಕ್ ವಾಗ್ದಾಳಿ

ಸೈಡ್ ಇಫೆಕ್ಟ್ ಇರುವ ಔಷಧಿ ತೆಗೆದುಕೊಳ್ಳಬಾರದೇ, ಡಾ ಸಿಎನ್ ಮಂಜುನಾಥ್ ಟಿಪ್ಸ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments