Webdunia - Bharat's app for daily news and videos

Install App

ಅಟಲ್-ಮೋದಿ ಕನಸಿನ ಯೋಜನೆಗೆ ಮೇನಕಾ ವಿರೋಧ

Webdunia
ಗುರುವಾರ, 15 ಮೇ 2014 (10:16 IST)
ಭಾರತೀಯ ಜನತಾ ಪಕ್ಷದ ಪ್ರಧಾನಿ ಪದದ ಅಭ್ಯರ್ಥಿ ನರೇಂದ್ರ ಮೋದಿಯವರ ನದಿ ಜೋಡಣೆ ಯೋಜನೆ ವಿಚಾರ ಅಪಾಯಕಾರಿ ಮತ್ತು ಅಸಂಬದ್ಧ ಎಂದು ಪಕ್ಷದ ಹಿರಿಯ ನಾಯಕಿ ಮೇನಕಾ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ. 
 
ಸ್ವಾಗತ ಸಮಾರಂಭ ಒಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೇನಕಾರವರ ಬಳಿ ಹಿರಿಯರೊಬ್ಬರು ಗೋಮತಿ ನದಿಯನ್ನು ಶಾರದಾ ನದಿಯ ಜತೆ ಜೋಡಿಸುವ ಸಲಹೆ ನೀಡಿದರು. ಆಗ ಅದು ಅತ್ಯಂತ ಅಪಾಯಕಾರಿ ಎಂದು ಉದ್ಘರಿಸಿದ ಗಾಂಧಿ "ನದಿಗಳನ್ನು ಜೋಡಿಸುವ ಮಹತ್ವಪೂರ್ಣ ಯೋಜನೆ ವಾಜಪೇಯಿ ಸರಕಾರದ ಕಚೇರಿಯಲ್ಲಿ ಉಲ್ಲೇಖಿಸಲ್ಪಟ್ಟಿತ್ತು. ಆದರೆ ಅದು ಜಾರಿಯಾಗುವುದನ್ನು ವಾಜಪೇಯಿ ತಡೆದಿದ್ದರು" ಎಂದರು. 
 
ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಮೋದಿ ಬರ ಮತ್ತು ಪ್ರವಾಹದಿಂದ ಮುಕ್ತಿ ಪಡೆಯಲು ನದಿಗಳ ಜೋಡಣೆಯ ಅವಶ್ಯಕತೆ ಇದೆ ಎಂಬುದನ್ನು ಒತ್ತಿ ಹೇಳಿದ್ದರು. ಆದರೆ ಈ ಯೋಜನೆಗೆ ಮೇನಕಾ ಪ್ರಬಲ ವಿರೋಧ ವ್ಯಕ್ತ ಪಡಿಸಿದ್ದಾರೆ. "ಆ ಯೋಜನೆಯನ್ನು ಅಸ್ತಿತ್ವಕ್ಕೆ ತರುವುದು ಬೇಡ ಎಂದು ನಾನೇ ವಾಜಪೇಯಿ ಅವರನ್ನು ತಡೆದಿದ್ದೆ, ಈ ತರಹದ ಯೋಜನೆಗಳು ಅಸಂಬದ್ಧ ಎಂದಷ್ಟೇ ಹೇಳಬಹುದು" ಎಂದು ಅವರು ಹೇಳಿದ್ದಾರೆ. 
 
"ಜಗತ್ತಿನಲ್ಲಿ ಈ ಯೋಜನೆಯಷ್ಟು ಕೆಟ್ಟ ಯೋಜನೆ ಮತ್ತೊಂದಿರಲಾರದು. ಪ್ರತಿ ನದಿ ತನ್ನದೆ ಆದ ಪ್ರತ್ಯೇಕ ವಿಶೇಷತೆಯನ್ನು ಹೊಂದಿರುತ್ತದೆ. ಪ್ರತಿ ನದಿಯ ನೀರು ಮತ್ತು ಅದರಲ್ಲಿ ವಾಸಿಸುವ ಮೀನುಗಳಲ್ಲಿ ವಿಭಿನ್ನತೆ ಇರುತ್ತದೆ. ಒಂದು ವೇಳೆ ಎರಡು ನದಿಗಳನ್ನು ಜೋಡಿಸಿದರೆ, ಅವರಡು ನಾಶವಾಗಿ ಹೋಗುತ್ತವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ". 
 
"ಕಾಲುವೆಗಳನ್ನು ನಿರ್ಮಿಸಬಹುದು ಮತ್ತು ಬದಲಾಯಿಬಹುದು. ಆದರೆ ಎರಡು ನದಿಗಳನ್ನು ಜೋಡಿಸುವುದು ಅತ್ಯಂತ ಅಪಾಯಕಾರಿ" ಎಂದ ಮೇನಕಾ "ಈ ಯೋಜನೆಗಳಿಗೆ ಜಮೀನು ಎಲ್ಲಿ ಲಭ್ಯವಿದೆ? ಈ ಪ್ರಾಜೆಕ್ಟ್ ಅಳವಡಿಸಲು 10 ರಿಂದ 15 ಲಕ್ಷ ಎಕರೆ ಭೂಮಿ ಅವಶ್ಯವಿದೆ. ಅದನ್ನು ಎಲ್ಲಿಂದ ತರಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments