Select Your Language

Notifications

webdunia
webdunia
webdunia
webdunia

ಶಾರುಕ್ ಕುಟುಂಬ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ: ಕಾಂಗ್ರೆಸ್

ಶಾರುಕ್ ಕುಟುಂಬ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ: ಕಾಂಗ್ರೆಸ್
ನವದೆಹಲಿ , ಬುಧವಾರ, 4 ನವೆಂಬರ್ 2015 (18:12 IST)
ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ಬಾಲಿವುಡ್ ನಟ ಶಾರುಕ್ ಖಾನ್ ಬಗ್ಗೆ ನೀಡಿದ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಶಾರುಕ್ ಖಾನ್ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರು ಅದು ಹೇಗೆ ಪಾಕಿಸ್ತಾನಿಯರಾಗುತ್ತಾರೆ ಎಂದು ಕಿಡಿಕಾರಿದೆ. 
 
ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ವಿರುದ್ಧ ಬೇಜವಾಬ್ದಾರಿ ಹೇಳಿಕೆ ನೀಡಿದವರೆಲ್ಲರಿಗೂ ನನ್ನ ಹೇಳಿಕೆ ಅನ್ವಯವಾಗುತ್ತದೆ. ಶಾರುಕ್ ಖಾನ್ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರು. ಅವರು ಹೇಗೆ ಪಾಕಿಸ್ತಾನಿಯಾಗುತ್ತಾರೆ. ಮತ್ತೊಂದೆಡೆ ಆರೋಪ ಮಾಡುತ್ತಿರುವವರ ಕುಟುಂಬದ ಯಾರೊಬ್ಬರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ನಿಮ್ಮನ್ನು ನೀವು ಹೇಗೆ ದೇಶಭಕ್ತ ಎಂದು ಕರೆದುಕೊಳ್ಳುತ್ತೀರಿ? ಎಂದು ಕಾಂಗ್ರೆಸ್ ಮುಖಂಡ ರಷೀದ್ ಅಳ್ವಿ ಹೇಳಿದ್ದಾರೆ.
 
ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ಮುಖಂಡರು, ದ್ವೇಷದ ವಾತಾವರಣವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಸಹಿಷ್ಣುತೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ಎಲ್ಲರು ಪಾಕಿಸ್ತಾನದಿಂದ ಬಂದವರೇ?ಎಂದು ಕಿಡಿಕಾರಿದ್ದಾರೆ. 
 
ಅಸಹಿಷ್ಣುತೆ ಬಗ್ಗೆ ಕೇವಲ ಶಾರುಕ್ ಹೇಳಿಕೆ ನೀಡಿಲ್ಲ. ರಾಷ್ಟ್ರಪತಿ, ಆರ್‌ಬಿಐ ಗವರ್ನರ್ ಸೇರಿದಂತೆ ಹಲವಾರು ನಾಯಕರು ಹೇಳಿಕೆ ನೀಡಿದ್ದಾರೆ. ಅವರೆಲ್ಲರು ಪಾಕಿಸ್ತಾನಿಯರೇ? ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
 
ಅಸಹಿಷ್ಣುತೆ ಕುರಿತಂತೆ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ಪಕ್ಷ ಕೂಡಾ ಪಾಕಿಸ್ತಾನಿಯೇ? ಶಾರುಕ್ ಕೇವಲ ಮುಸ್ಲಿಂ ಎನ್ನುವ ಕಾರಣಕ್ಕೆ ಅವರನ್ನು ಪಾಕಿಸ್ತಾನಿ ಎಂದು ಹೇಳಿಕೆ ನೀಡುತ್ತಿರುವುದು ತೀವ್ರ ಖಂಡನೀಯ ಎಂದು ಕಾಂಗ್ರೆಸ್ ವಕ್ತಾರ ರಷೀದ್ ಅಳ್ವಿ ಹೇಳಿದ್ದಾರೆ.

Share this Story:

Follow Webdunia kannada