Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯಿಂದ ಅಂತರ ಕಾಯ್ದುಕೊಳ್ಳಲು ಎಸ್‌ಪಿಜಿ ಕಮಾಂಡೋ ಪಡೆಗಳಿಗೆ ಆದೇಶ

ಪ್ರಧಾನಿ ಮೋದಿಯಿಂದ ಅಂತರ ಕಾಯ್ದುಕೊಳ್ಳಲು ಎಸ್‌ಪಿಜಿ ಕಮಾಂಡೋ ಪಡೆಗಳಿಗೆ ಆದೇಶ
ನವದೆಹಲಿ , ಬುಧವಾರ, 30 ಜುಲೈ 2014 (14:24 IST)
ಕೇಂದ್ರ ಸಚಿವ ನಿತಿನ್ ಗಡ್ಕರಿ ನಿವಾಸದಲ್ಲಿ ಕಳ್ಳಗಿವಿ ಪ್ರಕರಣಕ್ಕೆ ಸಂಬಂಧಿಸಿದ ಬಿಸಿ, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಟ್ಟಿದೆ. 
 
ಮಾಧ್ಯಮ ವರದಿಗಳ ಪ್ರಕಾರ, ಪ್ರಧಾನಮಂತ್ರಿಯ ರಕ್ಷಣೆಯ ಹೊಣೆಹೊತ್ತ ವಿಶೇಷ ರಕ್ಷಣಾ ದಳ(ಎಸ್‌ಪಿಜಿ)ವನ್ನು ಕೂಡಾ ನರೇಂದ್ರ ಮೋದಿಯಿಂದ ದೂರವಿರುವಂತೆ ಆದೇಶಿಸಲಾಗಿದೆ, 
 
ಪ್ರಧಾನಮಂತ್ರಿ ನರೇಂದ್ರ ಮೋದಿ ಇತರರೊಂದಿಗೆ ನಡೆಸುವ ರಹಸ್ಯ ಸಂಭಾಷಣೆಗಳನ್ನು ಎಸ್‌ಪಿಜಿ ದಳ ಆಲಿಸದಿರಲಿ ಎನ್ನುವ ಉದ್ದೇಶದಿಂದ ಎಸ್‌ಪಿಜಿ ತಂಡಕ್ಕೆ ಪ್ರಧಾನಿ ಮೋದಿಯಿಂದ ದೂರವಿರುವಂತೆ ಎಚ್ಚರಿಕೆ ನೀಡಲಾಗಿದೆ.
 
ಕೆಲ ವರ್ಷಗಳ ಹಿಂದೆ ಮಾಜಿ ಪ್ರಧಾನಮಂತ್ರಿಗಳ ರಹಸ್ಯ ಮಾತುಗಳನ್ನು ಆಲಿಸಿದ್ದ ಎಸ್‌ಪಿಜಿ ಪಡೆಯ ಸದಸ್ಯನೊಬ್ಬ ರಹಸ್ಯ ಮಾತುಕತೆಗಳನ್ನು ಇತರರಿಗೆ ರವಾನಿಸಿದ್ದ. ಇದರಿಂದ ಇದೀಗ ಎಚ್ಚೆತ್ತ ಸರಕಾರ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದೆ.
 
ಈ ಬೆಳವಣಿಗೆಗಳಿಂದ ಬಿಜೆಪಿ ನಾಯಕರಿಗೆ ಸಂತಸವಾಗಿದ್ದು, ಇನ್ಮುಂದೆ ಪ್ರಧಾನಿಯೊಂದಿಗೆ ಸೂಕ್ಷ್ಮವಾದ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಬಹುದು ಎಂದು ಹೇಳಿದ್ದಾರೆ.

Share this Story:

Follow Webdunia kannada